Select Your Language

Notifications

webdunia
webdunia
webdunia
webdunia

ಸೈಬರ್ ಮೋಸದಲ್ಲಿ ಸಿಲುಕಿದ ನಟಿ!

ಸೈಬರ್ ಮೋಸದಲ್ಲಿ ಸಿಲುಕಿದ ನಟಿ!
ಮುಂಬೈ , ಸೋಮವಾರ, 28 ಫೆಬ್ರವರಿ 2022 (17:53 IST)
ಮುಂಬೈ : ಸೈಬರ್ ಮೋಸಕ್ಕೆ ಹಲವು ಜನರು ಸಿಕ್ಕಿ ತಮ್ಮ ಆಸ್ತಿಯನ್ನೆ ಕಳೆದುಕೊಂಡಿರುವ ಸುದ್ದಿಯನ್ನು ನೋಡಿದ್ದೇವೆ.

ಈಗ ನಟಿಯೊಬ್ಬರು ಸೈಬರ್ ಮೋಸದ ಜಾಲಕ್ಕೆ ಸಿಕ್ಕಿ, 1.48 ಲಕ್ಷ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

64 ವರ್ಷದ ಪಾರ್ಲೆಯ ಮರಾಠಿ ಸಿನಿಮಾ ನಟಿಯೊಬ್ಬರು ಟೆಲಿಕಾಂ ಆಪರೇಟರ್ ಏರ್ಟೆಲ್ ಕಳುಹಿಸಿದ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಕರೆ ಬಂದಿದ್ದು, ವಂಚಕರು ಎಟಿಎಂ ಕಾರ್ಡ್ನ ಪೂರ್ತಿ ವಿವರವನ್ನು ಪಡೆದುಕೊಂಡಿದ್ದಾರೆ.

ಅಲ್ಲದೆ ಈ ನಟಿ ವಂಚಕರಿಗೆ ತನ್ನ ಕೆವೈಸಿ ನಂಬರ್ ಸಹ ಕೊಟ್ಟಿದ್ದಾರೆ. ಪರಿಣಾಮ ಆಕೆಯ ಖಾತೆಯಿಂದ ವಂಚಕರು 1.48 ಲಕ್ಷ ರೂ. ವಂಚಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನನ್ನ ಗಂಡನ ಫೋನ್ಗೆ ಒಂದು ಸಂದೇಶ ಬಂತು. ಏರ್ಟೆಲ್ನಿಂದ ನನಗೆ ಕರೆ ಸಹ ಬಂದ್ದಿತ್ತು. ಆಗ ನಾನು ಅವರು ಕೇಳಿದ ಎಲ್ಲ ವಿವರಗಳನ್ನು ಕೊಟ್ಟಿದ್ದು, ಕೆವೈಸಿ ಸಹ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.

ಪೊಲೀಸರು ಈ ಕುರಿತು ಪ್ರತಿಕ್ರಿಯಿಸಿದ್ದು, ನಟಿ ತನ್ನ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದ್ದು, ಅಪ್ಲಿಕೇಶನ್ ಸಹಾಯದಿಂದ ವಂಚಕರು ಎಲ್ಲ ವಿವರಗಳನ್ನು ನೋಡಿಕೊಂಡಿದ್ದಾರೆ. ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆಯಾಗಿರುವುದನ್ನು ನೋಡಿ ನಟಿ ಶಾಕ್ ಆಗಿದ್ದಾರೆ.

ನಂತರ ನಟಿ ಬ್ಯಾಂಕಿಗೂ ಹೋಗಿ ಮಾಹಿತಿ ತಿಳಿಸಿದ್ದು, 1.48 ಲಕ್ಷ ರೂ. ವರ್ಗಾವಣೆಯಾಗಿರುವುದು ಸತ್ಯ ಎಂಬುದು ತಿಳಿದುಬಂದಿದೆ. ತಕ್ಷಣ ನಟಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ತನಿಖೆ ನಡೆಯುತ್ತಿದೆ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಭೀಕರ ಅಪಘಾತ