Select Your Language

Notifications

webdunia
webdunia
webdunia
webdunia

ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಮಿತ್ ಶಾ

Amit Shah

Sampriya

ನವದೆಹಲಿ , ಮಂಗಳವಾರ, 11 ಜೂನ್ 2024 (15:06 IST)
Photo Courtesy X
ನವದೆಹಲಿ: ಬಿಜೆಪಿಯ ಚುನಾವಣಾ ಚಾಣಕ್ಯ, ಗಾಂಧಿನಗರ ಕ್ಷೇತ್ರದ ಸಂಸದ ಅಮಿತ್ ಶಾ ಅವರು ಇಂದು ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮೋದಿ ಅವರ ಅತ್ಯಂತ ಆತ್ಮೀಯರಾಗಿರುವ 59 ವರ್ಷದ ಅಮಿತ್‌ ಶಾ, ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿದ್ದ ಅವರು, ದೇಶದ ಸೇವೆಗಾಗಿ ಹುತಾತ್ಮರಾಗಿದ್ದ ಪೊಲೀಸರಿಗೆ ಗೌರವ ಸಲ್ಲಿಸಿದರು.

ಅವರು ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಎನ್‌ಡಿಎ ಮೈತ್ರಿಕೂಟವನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. 2019ರಿಂದಲೂ ಗೃಹ ಖಾತೆ ನಿಭಾಯಿಸಿದ್ದಾರೆ. 2014ರಿಂದ 2020ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ. ಈ ಬಾರಿ, ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ಐವರ ಖಾತೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮೋದಿ ಅವರು ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ: ಸ್ಪೀಕರ್‌ ಆಯ್ಕೆಗೆ ಚುನಾವಣೆ ಸಾಧ್ಯತೆ