Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಬಂದ ಮೇಲೆ ಬದಲಾವಣೆ ಶುರುವಾಗಿದೆ: ಅಮಿತ್ ಶಾ

Amit Shah
ಸಿಲಿಗುರಿ, ಪಶ್ಚಿಮ ಬಂಗಾಳ: ಮೂರು ನೂತನ ಅಪರಾಧಿಕ ಕಾಯ್ದೆಗಳ ಕುರಿತಾದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಇಲ್ಲಿ ಕೇಡರ್ ಆಡಳಿತವಿತ್ತು. ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾಗಲೂ ಕೇಡರ್ ಆಡಳಿತವಿತ್ತು, ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗೂಂಡಾಗಳ ಕೇಡರ್ ಆಡಳಿತವಿತ್ತು. ಆದರೆ ಈಗ ಸುವೇಂದು ಅಧಿಕಾರಿ ನಾಯಕತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಾನೂನಿನ ಆಡಳಿತ ಸ್ಥಾಪನೆಯಾಗಿದೆ. ಇದೊಂದು ದೊಡ್ಡ ಪರಿವರ್ತನೆ.
 
ಪಶ್ಚಿಮ ಬಂಗಾಲ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಈ ಹಿಂದಿನ ಟಿಎಂಸಿ ಸರ್ಕಾರ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಪೌರತ್ವ ತಿದ್ದುಪಡಿ ಕಾಯ್ದೆ (CAA) ತಂದಾಗ ಮಮತಾ ಬ್ಯಾನರ್ಜಿ 'ಇದನ್ನು ಹೇಗೆ ಮಾಡುತ್ತೀರಾ? ನಾವು ಇದನ್ನು ಸ್ವೀಕರಿಸುವುದಿಲ್ಲ' ಎಂದು ನನ್ನನ್ನು ಗೇಲಿ ಮಾಡುತ್ತಿದ್ದರು. ಮಮತಾ ದೀದಿ, ನೀವು ಅದನ್ನು ಸ್ವೀಕರಿಸಲಿಲ್ಲ ನಿಜ, ಆದರೆ ನೀವು ಮತ್ತು ನಿಮ್ಮ ಸರ್ಕಾರ ಎರಡೂ ಅಧಿಕಾರದಿಂದ ಹೊರಹೋದವು. ಈಗ ಬಿಜೆಪಿ ಅಧಿಕಾರದಲ್ಲಿದೆ.
 
ಬಾಂಗ್ಲಾದೇಶದಿಂದ ಬಂದಿರುವ ಹಿಂದೂ, ಸಿಖ್ ಮತ್ತು ಜೈನ ನಿರಾಶ್ರಿತರಿಗೆ ನಾನು ಮಾತು ನೀಡುತ್ತಿದ್ದೇನೆ—ಮುಂಬರುವ 6 ತಿಂಗಳೊಳಗೆ ನಿಮಗೆ ಪೌರತ್ವ ನೀಡಲಾಗುವುದು. ಸಿಎಎ ಅಡಿಯಲ್ಲಿ ಪೌರತ್ವ ಅಂತಿಮಗೊಳಿಸಲು ಕೇಂದ್ರ ಗೃಹ ಸಚಿವಾಲಯವು ಬಂಗಾಳದ 8 ಕಲೆಕ್ಟರ್‌ಗಳಿಗೆ ಅಧಿಕಾರ ನೀಡಿದೆ. ಇಂತಹ ಎಲ್ಲಾ ನಿರಾಶ್ರಿತರಿಗೂ ಖಂಡಿತವಾಗಿಯೂ ಭಾರತೀಯ ಪೌರತ್ವ ಸಿಗಲಿದೆ. ಆದರೆ ಇದನ್ನು ಕೇಳಿ ಅಕ್ರಮ ನುಸುಳುಕೋರರು ಸಂಭ್ರಮಿಸುವ ಅಗತ್ಯವಿಲ್ಲ. ಶೋಧಿಸಿ, ತೆಗೆದುಹಾಕಿ ಮತ್ತು ಗಡೀಪಾರು ಮಾಡಿ (Detect, Delete and Deport)... ಎಂಬುದು ಬಂಗಾಳ ಸರ್ಕಾರದ ಕಟ್ಟುನಿಟ್ಟಿನ ನಿರ್ಧಾರವಾಗಿದೆ."

Share this Story:

Follow Webdunia kannada

ಮುಂದಿನ ಸುದ್ದಿ

ನೆಹರೂ ಕಾಂಗ್ರೆಸ್ ಹಗರಣದ ಪಿತಾಮಹ: ಶ್ರೀರಾಮುಲು