Webdunia - Bharat's app for daily news and videos

Install App

ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಗೃಹಸಚಿವ ಅಮಿತ್ ಶಾ

Amit Shah
Krishnaveni K
ಶುಕ್ರವಾರ, 19 ಏಪ್ರಿಲ್ 2024 (14:52 IST)
ಅಹಮ್ಮದಾಬಾದ್: ಮುಂಬರುವ ಲೋಕಸಭೆ ಚುನಾವಣೆಗೆ ಗಾಂಧಿನಗರದಿಂದ ಸ್ಪರ್ಧಿಸುತ್ತಿರುವ ಗೃಹಸಚಿವ ಅಮಿತ್ ಶಾ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮುನ್ನ ಗೃಹಸಚಿವ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ಈ  ವೇಳೆ ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಾಥ್ ನೀಡಿದ್ದಾರೆ. 12.39 ರ ವಿಜಯ ಮುಹೂರ್ತದಲ್ಲಿ ಅಮಿತ್ ಶಾ ಗಾಂಧಿನಗರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಳೆದ ಬಾರಿಯೂ ಅಮಿತ್ ಶಾ ಇಲ್ಲಿಂದಲೇ ಸ್ಪರ್ಧಿಸಿದ್ದರು. ಆಗ ಅವರು 5 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಗುಜರಾತ್ ನಲ್ಲಿ ಮೇ 7 ಕ್ಕೆ ಎಲ್ಲಾ 26 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಕೂಡಾ ಗುಜರಾತ್ ನವರೇ ಆದರೂ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ.

ಗುಜರಾತ್ ನಲ್ಲಿ ಬಿಜೆಪಿ ಆಡಳಿತ ಜಾರಿಯಲ್ಲಿದೆ. ಈ ರಾಜ್ಯದಲ್ಲಿ ಸತವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿಯ ಪ್ರಬಲ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದೆ. ಗಾಂಧಿನಗರ ಕ್ಷೇತ್ರಕ್ಕೆ ಅದರದ್ದೇ ಆದ ಘನತೆಯಿದೆ. ಈ ಮೊದಲು ವಾಜಪೇಯಿ ಕಾಲದಲ್ಲಿ ಎಲ್ ಕೆ ಅಡ್ವಾಣಿಯವರು ಇದೇ ಕ್ಷೇತ್ರದಿಂದ ಸತತವಾಗಿ ಸ್ಪರ್ಧಿಸಿ ಗೆದ್ದವರು. ಹೀಗಾಗಿ ಗಾಂಧಿನಗರ ಮತ್ತು ಬಿಜೆಪಿಗೆ ಅವಿನಾಭಾವ ನಂಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments