Select Your Language

Notifications

webdunia
webdunia
webdunia
webdunia

ನೇತಾಜಿ ನಮಗಾಗಿ ಪ್ರಚಾರ ನಡೆಸುತ್ತಾರೆ: ಅಖಿಲೇಶ್ ವಿಶ್ವಾಸ

Netaj
ಲಖನೌ , ಸೋಮವಾರ, 30 ಜನವರಿ 2017 (16:02 IST)
ತಂದೆ ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷಕ್ಕಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮುನಿಸಿನ ಬಳಿ ಎಸ್‌ಪಿ ಸ್ಥಾಪಕ ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಖಿಲೇಶ್ ಈ ಪ್ರತಿಕ್ರಿಯೆ ನೀಡಿದ್ದಾರೆ. 

ರಾಷ್ಟ್ರೀಯ ಸುದ್ದಿವಾಹಿನಿ ಜತೆ ಮಾತನಾಡುತ್ತಿದ್ದ ಅವರು, ಅಪ್ಪ ನಮಗಾಗಿ ಪ್ರಚಾರ ನಡೆಸುತ್ತಾರೆ ಎಂಬ ಭರವಸೆ ನನಗಿದೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೇರುವುದರಲ್ಲಿ ಸಂದೇಹವಿಲ್ಲ, ಎಂದಿದ್ದಾರೆ ಅಖಿಲೇಶ್. 
 
ರಾಜ್ಯದಲ್ಲಿ ನಿಮಗೆ ನೇರ ಸ್ಪರ್ಧಿಯಲ್ಲದ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವೇನಿತ್ತು ಎಂದು ಕೇಳಲಾಗಿ ನಾವು ಏಕಾಂಗಿಯಾಗಿ ಗೆಲ್ಲಬಲ್ಲೆವು, ಆದರೆ ಮೈತ್ರಿ ಫಲಿತಾಂಶವನ್ನು ದೃಢೀಕರಿಸುತ್ತದೆ, ಎಂದು ಅಖಿಲೇಶ್ ತಿಳಿಸಿದ್ದಾರೆ. 
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು ನಾನು ಕಾನೂನು ಸುವ್ಯವಸ್ಥೆಗನುಗುಣವಾಗಿ ಕೆಲಸ ಮಾಡಿದ್ದೇನೆ, ಎಂದು ಪ್ರತಿಪಾದಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಕಾಂಗ್ರೆಸ್‌ನಲ್ಲಿಯೇ ಮುಂದುವರೆಯಬೇಕು: ಪ್ರಕಾಶ್ ಹುಕ್ಕೇರಿ