Select Your Language

Notifications

webdunia
webdunia
webdunia
webdunia

ಪಠಾನ್‌ಕೋಟ್ ವಾಯುನೆಲೆಯಲ್ಲಿ ಮತ್ತೆ ಉಗ್ರರು ಪ್ರತ್ಯಕ್ಷ?

ಪಠಾನ್‌ಕೋಟ್ ವಾಯುನೆಲೆಯಲ್ಲಿ ಮತ್ತೆ ಉಗ್ರರು ಪ್ರತ್ಯಕ್ಷ?
ಪಠಾನ್‌ಕೋಟ್ , ಮಂಗಳವಾರ, 27 ಸೆಪ್ಟಂಬರ್ 2016 (20:23 IST)
ಪಠಾನ್‌ಕೋಟ್ ವಾಯುನೆಲೆಗೆ ಹತ್ತಿರವಿರುವ ಪ್ರದೇಶದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗುತ್ತಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ವಾಯುನೆಲೆಯಾದ್ಯಂತ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಠಾನ್ಕೋಟ್ ಮತ್ತು ಡಾಲ್‌ಹೌಸ್ ರಸ್ತೆಯಲ್ಲಿ ಸೇನಾಪಡೆಗಳು ತೀವ್ರ ಶೋಧ ಕಾರ್ಯ ಆರಂಭಿಸಿದ್ದು, ಎಲ್ಲಾ ಕಡೆ ತಪಾಸಣೆ ನಡೆಸಲಾಗುತ್ತಿದೆ. ಸ್ವಾತ್ ತಂಡ ಸೇರಿದಂತೆ ಸುಮಾರು 400 ಭದ್ರತಾ ಸಿಬ್ಬಂದಿಗಳನ್ನು ಸರ್ಚ್ ಆಪರೇಶನ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪಠಾನ್ಕೋಟ್ ಮತ್ತು ಡಾಲ್‌ಹೌಸ್ ರಸ್ತೆಯಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗುತ್ತಿದ್ದಾರೆ ಎನ್ನುವ ಖಚಿತ ವರದಿಗಳ ಆಧಾರದ ಮೇಲೆ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪಠಾನ್‌ಕೋಟ್ ಎಸ್‌ಎಸ್‌ಪಿ ರಾಕೇಶ್ ಕೌಶಾಲ್ ತಿಳಿಸಿದ್ದಾರೆ. 
 
ವಾಯುನೆಲೆಯಲ್ಲಿರುವ ಭ್ರದ್ರತಾ ಸಿಬ್ಬಂದಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಹೋದ್ರೆ ಹೋಗಲಿ ನೀರು ಬಿಡಬಾರದು,: ಜಿ. ಮಾದೇಗೌಡ ಗುಡುಗು