Select Your Language

Notifications

webdunia
webdunia
webdunia
webdunia

ಮತದಾರರ ಓಲೈಕೆ: ಸ್ಮಾರ್ಟ್‌ಫೋನ್‌ಗಳ ಉಚಿತ ವಿತರಣೆಗೆ ಅಖಿಲೇಶ್ ಭರವಸೆ

ಮತದಾರರ ಓಲೈಕೆ: ಸ್ಮಾರ್ಟ್‌ಫೋನ್‌ಗಳ ಉಚಿತ ವಿತರಣೆಗೆ ಅಖಿಲೇಶ್  ಭರವಸೆ
ಲಕ್ನೋ: , ಮಂಗಳವಾರ, 6 ಸೆಪ್ಟಂಬರ್ 2016 (15:03 IST)
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಉಚಿತಕೊಡುಗೆಗಳ ಭರವಸೆ ನೀಡುತ್ತವೆ. 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ಭರವಸೆ ನೀಡಿತ್ತು. ಅದೇ ರೀತಿಯ ಪ್ರಯೋಗವನ್ನು ಪುನರಾವರ್ತಿಸಿರುವ ಅಖಿಲೇಶ್ ಯಾದವ್ ಸರ್ಕಾರ ಸ್ಮಾರ್ಟ್ ಫೋನ್‌ಗಳ ಉಚಿತ ವಿತರಣೆಯನ್ನು ಪ್ರಕಟಿಸಿವೆ.  ಆದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ಈ ಯೋಜನೆಗೆ ಅರ್ಹರಲ್ಲ.
 
ಸರ್ಕಾರ ಮತ್ತು ಜನತೆ ನಡುವೆ ಎರಡು ಮಾರ್ಗಗಳ ಸಂಪರ್ಕ ಸಾಧಿಸಲು ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಕುರಿತು ನೇರ ಫೀಡ್‌ಬ್ಯಾಕ್ ಪಡೆಯಲು ಸ್ಮಾರ್ಟ್ ಫೋನ್ ಯೋಜನೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ಉಲ್ಲೇಖಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.
 
 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಸಂಪೂರ್ಣ ಬಹುಮತ ಸಾಧಿಸಿದ್ದು, ಅದರ ಮುಖ್ಯ ಚುನಾವಣೆ ಭರವಸೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಕೂಡ ಸೇರಿತ್ತು. ಈಗ ಅಖಿಲೇಶ್ ಸರ್ಕಾರ ವಿತರಿಸಲು ನಿರ್ಧರಿಸಿರುವ  ಸ್ಮಾರ್ಟ್‌ಫೋನ್‌ನಲ್ಲಿ ವಿಸ್ತೃತ್ ಆ್ಯಪ್ ಅಳವಡಿಸಲಾಗಿದ್ದು, ಆಡಿಯೊ ವಿಷುಯಲ್ ಮತ್ತು ಪಠ್ಯದ ಮೂಲಕ ರಾಜ್ಯಸರ್ಕಾರದ ಎಲ್ಲಾ ಮಾಹಿತಿಯನ್ನು ಜನರಿಗೆ ಮುಟ್ಟಿಸಲಾಗುತ್ತದೆ.

ಫಲಾನುಭವಿಗಳನ್ನು ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತೆಂದು ಪ್ರಕಟಣೆ ತಿಳಿಸಿದೆ.
ಯಾವುದೇ ಭ್ರಷ್ಟಾಚಾರ ತಪ್ಪಿಸಲು ಸ್ಮಾರ್ಟ್‌ಪೋನ್ ನೇರವಾಗಿ ಫಲಾನುಭವಿಗಳಿಗೆ ಮುಟ್ಟುತ್ತದೆ. ಪ್ರೌಢಶಾಲೆ ತೇರ್ಗಡೆಯಾದ, 18 ವರ್ಷ ಪೂರೈಸಿದ ಹಾಗೂ ಕುಟುಂಬದ ಆದಾಯ ವರ್ಷಕ್ಕೆ 2 ಲಕ್ಷಕ್ಕಿಂತ ಕಡಿಮೆಯಿರುವವರು ಅರ್ಜಿ ಸಲ್ಲಿಸಬಹುದು ಎಂದು ಅದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಹಿಂಸಾಚಾರ: ಸಾವಿನ ಸಂಖ್ಯೆ 75ಕ್ಕೇರಿಕೆ