ಏರ್‌ ಇಂಡಿಯಾ ವಿಮಾನ ಪತನ: ಕೊನೆಗೂ 253 ಮೃತದೇಹಗಳ ಗುರುತು ಪತ್ತೆ

Sampriya
ಬುಧವಾರ, 25 ಜೂನ್ 2025 (14:26 IST)
Photo Credit X
ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಸಾವನ್ನಪ್ಪಿದ 253 ಮೃತದೇಹಗಳನ್ನು ಡಿಎನ್‌ಎ ಮೂಲಕ ಮತ್ತು ಆರು ದೇಹಗಳನ್ನು ಮುಖ ಗುರುತಿಸುವಿಕೆ ಮೂಲಕ ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಜೂನ್ 12 ರಂದು ಲಂಡನ್‌ತೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೀಡಾಯಿತು. ಒಟ್ಟು ಸಾವಿನ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇರಲಿಲ್ಲ. ಡಿಎನ್‌ಎ ಹೊಂದಾಣಿಕೆಯ ನಂತರವೇ ಅಂಕಿ ಅಂಶ ಬರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

256 ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ ದೇಹಗಳ ಡಿಎನ್‌ಎ ಗುರುತಿಸುವಿಕೆ ಇನ್ನೂ ಪ್ರಗತಿಯಲ್ಲಿದೆ.  

ಲಂಡನ್‌ಗೆ ಹೊರಟಿದ್ದ ಬೋಯಿಂಗ್ ಡ್ರೀಮ್‌ಲೈನರ್ ಎತ್ತರವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು ಮತ್ತು ಟೇಕ್-ಆಫ್ ಆದ ಸೆಕೆಂಡುಗಳ ನಂತರ ಅಪಘಾತಕ್ಕೀಡಾಯಿತು, ಮೇಘಾನಿ ನಗರದ BJ ವೈದ್ಯಕೀಯ ಕಾಲೇಜಿನ ವಸತಿ ಕ್ಯಾಂಪಸ್‌ನಲ್ಲಿ ಇಳಿಯಿತು. ವಿಮಾನದಲ್ಲಿದ್ದ 242 ರಲ್ಲಿ ಒಬ್ಬ ಪ್ರಯಾಣಿಕ -- 11A ನಲ್ಲಿ ಕುಳಿತಿದ್ದ ಬ್ರಿಟಿಷ್-ಭಾರತೀಯ ವ್ಯಕ್ತಿ ಮಾತ್ರ ಪ್ರಾಣಪಾಯದಿಂದ ಪಾರಾಗಿದ್ದರು.  

ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಮಾನದ ಕಪ್ಪು ಪೆಟ್ಟಿಗೆಯನ್ನು ಪರಿಶೀಲಿಸಲಾಗುತ್ತಿದೆ. 


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಲೆಗಳಿಗೆ ದಸರಾ ರಜೆ ಏಕಾಏಕಿ ವಿಸ್ತರಿಸಿದ ಸಿಎಂ ಸಿದ್ದರಾಮಯ್ಯ, ಕಾರಣ ಏನ್ ಗೊತ್ತಾ

ರಾಮನಿಗೆ ಅಗೌರವ ತೋರುವುದು ವಾಲ್ಮೀಕಿಯನ್ನು ಅವಮಾನಿಸಿದ ಹಾಗೇ: ಯೋಗಿ

ರಾಮಾಯಣವನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ನಿರ್ಧಾರ

ಸರ್ವೇ ವೇಳೆ ಮೂವರು ಸಿಬ್ಬಂದಿ ಸಾವು: ಕುಟುಂಬಕ್ಕೆ 20ಲಕ್ಷ ಪರಿಹಾರ ಘೋಷಿಸಿದ ಸಿಎಂ

ದೀಪಾವಳಿ ಹಬ್ಬಕ್ಕೆ ದಿನಗಣನೆ: ಪಟಾಕಿ ದುರಂತ ತಡೆಗೆ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಮುಂದಿನ ಸುದ್ದಿ
Show comments