ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಎಐ 171 ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 224 ಪ್ರಯಾಣಿಕರಲ್ಲಿ ಬಹುತೇಕರು ಬದುಕಿರುವ ಸಾಧ್ಯತೆ ಇಲ್ಲ ಎಂಬ ವರದಿಗಳು ಬರುತ್ತಿವೆ. ಮೃತಪಟ್ಟವರ ಒಬ್ಬೊಬ್ಬರ ಕರುಣಾಜನಕ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ.
ಈ ಭೀಕರ ದುರಂತ ಸಂಭವಿಸಿದ ವಿಮಾನದಲ್ಲಿ, ತನ್ನ ಪತಿಯನ್ನು ಸೇರಲು ಲಂಡನ್‌ಗೆ ತೆರಳುತ್ತಿದ್ದ ಇತ್ತೀಚೆಗೆ ವಿವಾಹವಾಗಿದ್ದ ಖುಷ್ಬೂ ರಾಜ್‌ಪುರೋಹಿತ್ ಕೂಡ ಇದ್ದರು.
ಜನವರಿಯಲ್ಲಿ ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ಅವರು ಮನ್ಫೂಲ್ ಸಿಂಗ್ ಅವರನ್ನು ಕೈ ಹಿಡಿದಿದ್ದರು. ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪತಿಯನ್ನು ಮೊದಲ ವಾರಿಗೆ ಭೇಟಿ ಮಾಡಲು ಖುಷ್ಭೂ ಅವರು ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು.
ವಿಮಾನವು 242 ಜನರನ್ನು ಹೊತ್ತೊಯ್ಯುತ್ತಿತ್ತು. ಸಿಬ್ಬಂದಿ ಸೇರಿದಂತೆ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು ಇದ್ದರು.