Select Your Language

Notifications

webdunia
webdunia
webdunia
Thursday, 6 March 2025
webdunia

ಎಐಎಡಿಎಂಕೆ ಪಕ್ಷದಿಂದ ವಿ.ಶಶಿಕಲಾ ನಟರಾಜನ್ ಉಚ್ಚಾಟನೆ

ಚೆನ್ನೈ , ಶುಕ್ರವಾರ, 10 ಫೆಬ್ರವರಿ 2017 (19:33 IST)
ಎಐಎಡಿಎಂಕೆ ಪಕ್ಷದಿಂದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಉಚ್ಚಾಟಿಸಲಾಗಿದೆ ಎಂದು ಎಐಎಡಿಎಂಕೆ ಅಧ್ಯಕ್ಷ ಮಧುಸೂಧನನ್ ಹೇಳಿದ್ದಾರೆ.
ಇತ್ತೀಚೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಶಶಿಕಲಾರೊಂದಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಪರ್ಕದಲ್ಲಿರದಂತೆ ನಿರ್ದೇಶನ ನೀಡಿದ್ದಾರೆ.
 
ಪನ್ನೀರ್ ಸೆಲ್ವಂ ನಿವಾಸದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮಧುಸೂಧನನ್, ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರಿಂದ ಅವರಿಗೆ ಪಕ್ಷದಲ್ಲಿ ಯಾವುದೇ ಅಧಿಕಾರವಿಲ್ಲ. ಅವರ ತೀರ್ಮಾನಗಳಿಗೆ ಪಕ್ಷ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಇಂದು ಮಧ್ಯಾಹ್ನ ಪಕ್ಷದ ಶಾಸಕರ ಸಭೆ ಕರೆದಿದ್ದ ಶಶಿಕಲಾ, ಮಧುಸೂದನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.
 
ಇದೇ ಸಂದರ್ಭದಲ್ಲಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್‌ರನ್ನು ಭೇಟಿಯಾದ ತಮಿಳುನಾಡಿನ ವಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್, ಸಿಎಂ ಪನ್ನೀರ್ ‌ಸೆಲ್ವಂಗೆ ಡಿಎಂಕೆ ಪಕ್ಷ ಬೇಷರತ್ತಾಗಿ ಬೆಂಬಲ ನೀಡಲು ಸಿದ್ದ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಅತ್ಯಂತ ದಢೂತಿ ಮಹಿಳೆ ನಾಳೆ ಮುಂಬೈಗೆ ಆಗಮನ