Select Your Language

Notifications

webdunia
webdunia
webdunia
webdunia

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

Former CM Vijay Rupani, Dr. Rajneesh Patel, Ahmedabad plane crash

Sampriya

ಗಾಂಧಿನಗರ , ಭಾನುವಾರ, 15 ಜೂನ್ 2025 (12:02 IST)
Photo Courtesy X
ಗಾಂಧಿನಗರ: ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಈತನಕ  ಡಿಎನ್‌ಎ ಹೊಂದಾಣಿಕೆ ಆಗಿಲ್ಲ.

ದುರ್ಘಟನೆಯಲ್ಲಿ ಸುಟ್ಟು ಕರಕಲಾದವ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆಯ ಮೂಲಕ ಸ್ಯಾಂಪಲ್ ಮ್ಯಾಚ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಚಾಲೆಂಜಿಂಗ್ ಕೆಲಸ. ಉದಯಪುರ, ಖೇಡಾ, ಅಹಮದಾಬಾದ್ ಜಿಲ್ಲೆಯ ಜನರಿಗೆ ಮೃತದೇಹ ನೀಡಲಾಗಿದೆ ಎಂದು ಸಿವಿಲ್ ಆಸ್ಪತ್ರೆ ಹೆಚ್ಚುವರಿ ಸೂಪರ್ ಇಂಟೆಂಡೆಂಟ್ ಡಾ.ರಜನೀಶ್ ಪಟೇಲ್ ತಿಳಿಸಿದ್ದಾರೆ.

ಈತನಕ 31 ಡಿಎನ್‌ಎ ಮ್ಯಾಚ್ ಆಗಿದೆ. 12 ಮೃತದೇಹಗಳ ಹಸ್ತಾಂತರ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ 31 ಶವದ ಗುರುತು ಪತ್ತೆ ಹಚ್ಚಲಾಗಿದೆ. ಜನರಿಂದ ಯಾವುದೇ ಹಣ ಪಡೆಯುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಈತನಕ 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಾಕಿ ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌