Select Your Language

Notifications

webdunia
webdunia
webdunia
webdunia

ಮಗಳ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಪೋಷಕರು!

ಮಗಳ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಪೋಷಕರು!
NewDelhi , ಗುರುವಾರ, 9 ಮಾರ್ಚ್ 2017 (11:26 IST)
ನವದೆಹಲಿ: ಪ್ರಧಾನಿ ಮೋದಿ ಮಕ್ಕಳ ಮನವಿಗೆ ಸ್ಪಂದಿಸುತ್ತಾರೆ ಎನ್ನುವುದು ಆಗಾಗ ಪ್ರೂವ್ ಆಗುತ್ತಿದೆ. ಇದೇ ಭರವಸೆಯಲ್ಲಿ ಆಗ್ರಾದ ದಂಪತಿ ತಮ್ಮ ಐದು ವರ್ಷದ ಮಗಳ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

 
ತಮ್ಮ ಪುತ್ರಿ ರಕ್ತ ಸಂಬಂಧಿತ ಅಪರೂಪದ ಖಾಯಿಲೆ ಥಲಸ್ಸೆಮಿಯಾ ಎನ್ನುವ ರೋಗಕ್ಕೆ ತುತ್ತಾಗಿದ್ದಾಳೆ. ಆಕೆಯ ಚಿಕಿತ್ಸೆಗೆ ಬೇಕಾದ ಖರ್ಚು ವೆಚ್ಚ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯವಿಟ್ಟು ಸಹಾಯ ಮಾಡಿ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಖಂಡಿತಾ ತಮ್ಮ ಮನವಿಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಪೋಷಕರದ್ದು. ಆದರೆ ಪ್ರಧಾನಿ ಕಚೇರಿಯಿಂದ ಇದುವರೆಗೆ ಈ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಹಿಂದೊಮ್ಮೆ ಕಾನ್ಪುರದ ಇಬ್ಬರು  ಹುಡುಗರು ತಮ್ಮ ತಂದೆಯ ಚಿಕಿತ್ಸೆಗೆ ನೆರವಾಗುವಂತೆ ಪತ್ರ ಬರೆದಾಗ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಉತ್ತರ ಬಂದಿತ್ತು. ಅದೇ ನಿರೀಕ್ಷೆಯಲ್ಲಿ ಈ ಐದು ವರ್ಷದ ಮಗುವಿನ ಪೋಷಕರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!