Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!

ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!
New Delhi , ಗುರುವಾರ, 9 ಮಾರ್ಚ್ 2017 (11:17 IST)
ಅಲಿಬಾಬಾಗೆ ಸೇರಿದ ಮೊಬೈಲ್ ವಹಿವಾಟು ಕಂಪೆನಿ ಯುಸಿ ವೆಬ್ ಭಾರತದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡುವ ಬಗ್ಗೆ ದೃಷ್ಟಿ ಹರಿಸಿದೆ. ಬಂಡವಾಳನ್ನು ಹೆಚ್ಚಿಸಿಕೊಳ್ಳಲು ಇರುವ ಅವಕಾಶಗಳನ್ನು ಹುಡುಕಾಟಕ್ಕಾಗಿ ಒಂದು ಪ್ರತ್ಯೇಕ ವಿಭಾಗವನ್ನೂ ಆರಂಭಿಸಿದ್ದಾರೆ.
 
ಎಷ್ಟು ಪ್ರಮಾಣದ ಬಂಡವಾಳ ಹೂಡಬೇಕು ಎಂಬ ಬಗ್ಗೆ ಮಿತಿಯನ್ನೂ ಇಟ್ಟುಕೊಳ್ಳಲಾಗಿದೆ. ಕಂಟೆಂಟ್ ವಿಸ್ತರಣೆಗಾಗಿ ಪೇಟಿಎಂನೊಂದಿಗೆ ಹಾಗೂ ಇತರೆ ಇ-ಕಾಮರ್ಸ್ ಕಂಪೆನಿಗಳೊಂದಿಗೂ ಕೈಜೋಡಿಸುವುದಾಗಿ ಕಂಪೆನಿ ಹೇಳಿದೆ.  
 
ಯುಸಿ ವೆಬ್ ಸಹ ವ್ಯವಸ್ಥಾಪಕರಾದ ಜಿಯಾಪೆಂಗ್ ವಿ-ಮೀಡಿಯಾ ಫ್ಲಾಟ್‌ಫಾಂ ಮೇಲೆ ಕಂಟೆಂಟ್ ಬರೆಯುತ್ತಿರುವವರಲ್ಲಿ ಮೊದಲ ಅತ್ಯುತ್ತಮ 1000 ಮಂದಿಗೆ ತಿಂಗಳಿಗೆ ತಲಾ ರೂ.50,000 ನೀಡುವುದಾಗಿ ಪ್ರಕಟಿಸಿದ್ದಾರೆ. ಯುಸಿ ವೆಬ್‌ನ ವಿ-ಮೀಡಿಯಾದಲ್ಲಿ ಬಳಕೆದಾರರು ತಮ್ಮ ವೈಯಕ್ತಿಯ ಲೇಖನ, ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಆಯ್ತು, ಇನ್ನು ಕೇರಳದಲ್ಲೂ ಪೆಪ್ಸಿ ಸಿಗಲ್ಲ?