Publish Date: Mon, 25 Apr 2016 (08:27 IST)
Updated Date: Mon, 25 Apr 2016 (10:00 IST)
ಬೆಂಗಳೂರಿನಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಅವೆನ್ಯೂ ರಸ್ತೆಯಲ್ಲಿರುವ ಗೋದಾಮುಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅದು ಅಕ್ಕಪಕ್ಕದ ಅಂಗಡಿಗಳು ಮತ್ತು ಐದಾರು ಮನೆಗಳಿಗೂ ಹರಡಿದೆ.
ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ದರ್ಗಾ ಮೈದಾನದ ಹೊರಭಾಗದಲ್ಲಿರುವ ಪೆಟ್ಟಿಗೆ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳೀಯರು ಹೇಳುವ ಪ್ರಕಾರ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದ್ದು ಹೊತ್ತಿ ಉರಿದ ಪೆಟ್ಟಿಗೆ ಕಾರ್ಖಾನೆ ಬೆಂಕಿ ಸುತ್ತಮುತ್ತಲು ಕೂಡ ಹರಡಿದೆ. ಬೆಂಕಿ ಮನೆಗಳಿಗೆ ತಾಗುತ್ತಿದ್ದಂತೆ ಮನೆ ಒಳಗಿದ್ದ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಎಲ್ಲರೂ ಹೊರಗೆ ಬಂದಿದ್ದಾರೆ.
ಸ್ಥಳಕ್ಕೆ ಧಾವಿಸಿರುವ 5 ಅಗ್ನಿಶಾಮಕ ವಾಹನಗಳು ಸತತ ಮೂರು ಗಂಟೆಗಳ ಪರಿಶ್ರಮದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.