ಅರವಿಂದ್ ಕೇಜ್ರಿವಾಲ್ ಅವರು ನಾಲಗೆ ಶಸ್ತ್ರಚಿಕಿತ್ಸೆ ಮಾಡಕೊಂಡಿರುವುದರ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಟೀಕಿಸಿದ್ದನ್ನು ಸಮರ್ಥಿಸಿಕೊಂಡು ಮತ್ತೊಬ್ಬ ಬಿಜೆಪಿ ನಾಯಕರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
"ಕೆಲವು ಜನರಿಗೆ ಮೌಖಿಕ ಅತಿಸಾರ ಕಾಯಿಲೆ ಇರುತ್ತದೆ. ಕೇಜ್ರಿವಾಲ್ ಕೂಡ ಅದೇ ಕೆಟಗರಿ ಅಡಿಯಲ್ಲಿ ಬರುತ್ತಾರೆ, ಹೀಗಾಗಿ ಪರಿಕ್ಕರ್ ಹೇಳಿರುವುದರಲ್ಲಿ ತಪ್ಪಿದೆ ಎಂದು ನನಗನಿಸುವುದಿಲ್ಲ", ಎಂದು ಬಿಜೆಪಿ ನಾಯಕ ಶೈನಾ ಎನ್.ಸಿ ಹೇಳಿದ್ದಾರೆ.
"ಪರಿಕ್ಕರ್ ಕೇಜ್ರಿವಾಲ್ ನಾಲಗೆ ಕತ್ತರಿಸಿದ್ದರ ಹಿನ್ನೆಲೆಯಲ್ಲಷ್ಟೇ ಮಾತನಾಡಿದ್ದರು. ಅದನ್ನು ಮೊದಲೇ ಮಾಡಬೇಕಿತ್ತು", ಎಂದು ಅವರು ವ್ಯಂಗ್ಯವಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿ ಮತ್ತು ತಮ್ಮ ವಿರುದ್ಧ ಮನಬಂದಂತೆ ಟೀಕೆಗಳನ್ನು ಮಾಡುತ್ತಿರುವುದರಿಂದ ಅವರಿಗೆ ತಮ್ಮ ನಾಲಗೆಯನ್ನು ಕತ್ತರಿಸಿಕೊಳ್ಳುವ ಪರಿಸ್ಥಿತಿ ಬಂದೊಗಿದೆ ಎನ್ನಿಸುತ್ತದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಶನಿವಾರ ಹೇಳಿಕೆ ನೀಡಿದ್ದರು.
ಬಳಿಕ ತಮ್ಮ ಹೇಳಿಕೆ ವಿವಾದವಾಗಲಿದೆ ಎನ್ನುವುದನ್ನು ಭಾವಿಸಿ ಉಲ್ಟಾ ಹೊಡೆದು ಕೇಜ್ರಿವಾಲ್ ಅನಾರೋಗ್ಯಕ್ಕೀಡಾದ ಬಗ್ಗೆ ಸಹಾನುಭೂತಿ ಇದೆ ಎಂದು ಹೇಳಿದ್ದರು.
ಕೇಜ್ರಿವಾಲ್ ದೆಹಲಿಯಲ್ಲಿ ಪ್ರಧಾನಿ ಮೋದಿಯ ವಿರುದ್ಧ ಹೇಳಿಕೆ ನೀಡುತ್ತಾರೆ. ಗೋವಾದಲ್ಲಿ ನನ್ನ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದಾಗಿ ಅವರ ನಾಲಿಗೆ ದೊಡ್ಡದಾಗಿತ್ತು. ಇದೀಗ ಅದನ್ನು ಕತ್ತರಿಸಲಾಗಿದೆ ಎಂದು ಅವರು ಅಣಕವಾಡಿದ್ದರು.
ಕೇಜ್ರಿವಾಲ್ ಬೆಂಗಳೂರಿನಲ್ಲಿ ನಾಲಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ನಿರಂತರ ಕೆಮ್ಮಿನಿಂದಾಗಿ ಅವರ ನಾಲಗೆ ಸ್ಥಾನ ಪಲ್ಲಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ