Select Your Language

Notifications

webdunia
webdunia
webdunia
webdunia

ಹತ್ರಾಸ್ ಪ್ರಕರಣವನ್ನೇ ಹೋಲುವ ಮತ್ತೊಂದು ಘಟನೆಗೆ ಸಾಕ್ಷಿಯಾದ ರಾಜಸ್ಥಾನ್

ಅಪರಾಧ ಸುದ್ದಿಗಳು
ನವದೆಹಲಿ , ಗುರುವಾರ, 1 ಅಕ್ಟೋಬರ್ 2020 (09:48 IST)
ನವದೆಹಲಿ: ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಕ್ರೂರವಾಗಿ ಮಾನಭಂಗ ಮಾಡಿದ ಪ್ರಕರಣ ಸಾಕಷ್ಟು ವಿವಾದಕ್ಕೀಡಾದ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.


ಹತ್ರಾಸ್ ಯುವತಿಯ ಪ್ರಕರಣದಲ್ಲಿ ಆಕೆಯ ಮಾನಾಪಹರಣವಾಗಿಲ್ಲ ಎಂದು ಪೊಲೀಸರು ವಾದಿಸುತ್ತಿದ್ದಾರೆ. ರಾಜಸ್ಥಾನ್ ನಲ್ಲೂ ಮೂವರು ಇದೇ ರೀತಿ ಇಬ್ಬರು ಅಪ್ರಾಪ್ತ ಯುವತಿಯರ ಮೇಲೆ ನಿರಂತರವಾಗಿ ಮೂರು ದಿನ ಲೈಂಗಿಕ ಶೋಷಣೆ ನಡೆದಿದೆ. ಆದರೆ ಪೊಲೀಸರು ಅದನ್ನು ನಿರಾಕರಿಸುತ್ತಿದ್ದಾರೆ.

15 ಮತ್ತು 13 ವರ್ಷದ ಅಪ್ರಾಪ್ತ ಯುವತಿಯರನ್ನು ಅಪಹರಿಸಿ ಜೈಪುರ ಮತ್ತು ಕೋಟಾಗೆ ಕರೆದುಕೊಂಡು ಹೋಗಿ ಅಲ್ಲಿ ಡ್ರಗ್ ನೀಡಿ ಇಬ್ಬರು ಅಪ್ರಾಪ್ತ ಬಾಲಕರು ಹಾಗೂ ಮೂವರು ಕಾಮುಕರು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಕುಟುಂಬ ವರ್ಗ ಆರೋಪಿಸಿದೆ. ದೂರು ಕೊಡದಂತೆ ನಮಗೆ ಬೆದರಿಕೆ ಹಾಕಲಾಗಿದೆ ಎಂದು ದೂರಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಲೈಂಗಿಕ ಕಿರುಕುಳ ನಡೆದಿಲ್ಲ ಎನ್ನುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಐಜಿ