Select Your Language

Notifications

webdunia
webdunia
webdunia
webdunia

ತಾಯಿಯ ಲಿವ್-ಇನ್ ಸಂಗಾತಿ ಕೊಲೆ ಮಾಡಿದ ಮಗ

ತಾಯಿಯ ಲಿವ್-ಇನ್ ಸಂಗಾತಿ ಕೊಲೆ ಮಾಡಿದ ಮಗ
ನವದೆಹಲಿ , ಸೋಮವಾರ, 24 ಜುಲೈ 2017 (16:14 IST)
ನವದೆಹಲಿ: ತನ್ನ ತಾಯಿಯೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ವೃದ್ಧನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ಬಜನ್ಪುರದಲ್ಲಿ ನಡೆದಿದೆ.
 
20 ವರ್ಷದ ಪ್ರೇಮನಾಥ್ ಎಂಬಾತನೇ ಹತ್ಯೆ ಮಾಡಿರುವ ವ್ಯಕ್ತಿಯಾಗಿದ್ದಾನೆ. ತನ್ನ ತಾಯಿಯ ಜತೆ 61 ವರ್ಷದ ವೃದ್ಧ ಮದನ್ ಮೋಹನ್ ಎಂಬಾತ ಲಿವ್ ಇನ್ ರಿಲೇಷನ್ ಶಿಪ್ ಹೊಂದಿದ್ದ. ಅಸಲಿಗೆ ಮದನ್ ಮೋಹನ್ ತನ್ನ ಪತ್ನಿ ತೀರಿಕೊಂಡ ಬಳಿಕ ಮನೆ ಕೆಲಸದವಳಾಗಿದ್ದ ಪ್ರೇಮನಾಥ್ ನ ತಾಯಿಯ ಜತೆ ಸಂಬಂಧವನ್ನು ಹೊಂದಿದ್ದ. ಪ್ರೇಮನಾಥ್ ಗೂ ಕೂಡ ತಂದೆ ಸಾವನ್ನಪ್ಪಿದ್ದ.
 
ಆದರೆ ಮದನ್ ಹಾಗೂ ಪ್ರೇಮನಾಥನ ತಾಯಿಯ ಸಂಬಂಧದ ಬಗ್ಗೆ ಆತನ ಸ್ನೇಹಿತರು ಗೇಲಿಮಾಡುತ್ತಿದ್ದರು. ಇದರಿಂದ ಬೇಸತ್ತ ಯುವಕ ತಾಯಿಯ ಲಿವ್ ಇನ್ ಸಂಗಾತಿಯಾದ ಮದನ್ ಮೋಹನ್ ನನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಉಸಿರುಗಟ್ಟಿಸಿ ಕೊಲೆಮಾಡಿದ್ದಾನೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಹೊಡೆಯೋರಿಗೊಂದು ಕಿಕ್ ಕೊಡುವ ಸುದ್ದಿ!