ಭಾರತದ ಭಾವಿ ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆಯನ್ನು ನಡೆಸಿ ನಂತರ ವಾರಣಾಸಿಗೆ ತೆರಳಿ ಗಂಗಾಪೂಜೆಯನ್ನು ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಲ್ಲದೇ ದೆಹಲಿ ಮತ್ತು ವಾರಣಾಸಿಯಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸಲಿದ್ದಾರೆ. ಅಲ್ಲದೇ ಅವರು ಒಂದು ಸಮಾವೇಶವನ್ನು ಕೂಡ ಹಮ್ಮಿಕೊಳ್ಳಲಿದ್ದಾರೆ.
* ಅಹಮದಾಬಾದನಿಂದ ಆಗಮಿಸಲಿರುವ ಮೋದಿಗೆ ದೆಹಲಿಯಲ್ಲಿ ಏಳು ಸ್ಥಳಗಳಲ್ಲಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
*ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಸಿ ಮೋದಿ ವಾರಣಾಸಿಗೆ ತೆರಳಿದ್ದಾರೆ.
* ರಾಷ್ಟ್ರ ರಾಜಧಾನಿಯಲ್ಲಿ ಮೋದಿಗೆ ಅಭೂತಪೂರ್ಣ ಸ್ವಾಗತ ನೀಡುವುದಕ್ಕೆ ಸಂಪೂರ್ಣ ತಯ್ಯಾರಿ ನಡೆಸಲಾಗಿದೆ. ಬಿಗಿ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ.
*ದೆಹಲಿಯಲ್ಲಿ ಏರಫೋರ್ಟಿಂದ ಬಿಜೆಪಿಯ ಕಚೇರಿಯವರೆಗಿ ಮೋದಿ ರೋಡ್ ಶೋವನ್ನು ಮಾಡಲಿದ್ದಾರೆ.
* ದೆಹಲಿಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ.
* ಪ್ರಧಾನಿ ಮನಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಮತ್ತು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
* ಮೋದಿಗೆ ವಿಶ್ವದ ವಿವಿಧ ದೇಶಗಳ ಮುಖ್ಯಸ್ಥರಿಂದ ಶುಭಾಶಯಗಳ ಮಹಾಪೂರ
* ಮೋದಿಗೆ ಕರೆ ಮಾಡಿ ಅಮೇರಿಕಾಕ್ಕೆ ಬರಲು ಆಮಂತ್ರಣ ನೀಡಿದ ಒಬಾಮಾ
* ಶ್ರೀಲಂಕಾದ ರಾಷ್ಟ್ರಪತಿ ಮತ್ತು ಪಾಕಿಸ್ತಾನದ ಪ್ರಧಾನಿಯಿಂದ ಮೋದಿಗೆ ಶುಭ ಕಾಮನೆ.