ಅತ್ಯಾಚಾರವೆಸಗಿ, 8 ವರ್ಷಗಳ ಶಿಕ್ಷೆ ಅನುಭವಿಸಿದ ನಂತ್ರ ಆಕೆಯನ್ನೇ ವಿವಾಹವಾದ ಭೂಪ

Webdunia
ಗುರುವಾರ, 5 ಜನವರಿ 2017 (16:24 IST)
ಅತ್ಯಾಚಾರದ ಆರೋಪ ಸಾಬೀತಾಗಿದ್ದರಿಂದ 8 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬ, ತಾನು ಅತ್ಯಾಚಾರವೆಸಗಿದ ಮಹಿಳೆಯನ್ನೇ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ.
 
30 ವರ್ಷ ವಯಸ್ಸಿನ ಮೋನೋಜ್ ಬೌರಿ ಮಹಿಳೆಯೊಬ್ಬಳನ್ನು ದೈಹಿಕವಾಗಿ ಬಳಸಿಕೊಂಡಿದ್ದ. ನಂತರ ಆಕೆಗೆ ಮಗು ಜನಿಸಿದಾಗ ವಂಚಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಬೌರಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. ವಿವಾಹವಾದಲ್ಲಿ ಕೇಸ್ ಹಿಂಪಡೆಯುವುದಾಗಿ ತಿಳಿಸಿದ್ದಳು ಎನ್ನಲಾಗಿದೆ.
 
ಆದರೆ, ಮೋನೋಜ್ ಬೌರಿ ವಿವಾಹವಾಗಲು ನಿರಾಕರಿಸಿದ್ದರಿಂದ ಆತನನ್ನು 2010ರಲ್ಲಿ ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಎಂಟು ವರ್ಷಗಳಿಂದ ತನ್ನನ್ನು ವಿವಾಹವಾಗುವಂತೆ ಮಹಿಳೆ ಪೀಡಿಸತೊಡಗಿದ್ದಳು.
 
ತಂದೆಯ ಹೆಸರಿರದ ಕಾರಣ ಪುತ್ರನನ್ನು ಯಾವುದೇ ಶಾಲೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಕೊನೆಗೂ ಮೋನೋಜ್ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ ಸಂತಸವಾಗಿದೆ ಎಂದು ಮಹಿಳೆ ತಿಳಿಸಿದ್ದಾಳೆ 
 
ಪುರುಲಿಯಾ ಜೈಲಿನಲ್ಲಿಯೇ ಇಬ್ಬರಿಗೆ ವಿವಾಹ ನೆರವೇರಿಸಲಾಯಿತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Andhrapradesh Rain: ಮೊಂತಾ ಚಂಡಮಾರುತಕ್ಕೆ ನೆಲಕಚ್ಚಿದ ಮರಗಳು, ಬೆಳೆ ಹಾನಿ

Video: ಅಲ್ಲಾಹು ಅಕ್ಬರ್ ಎನ್ನುತ್ತಾ ದೇವಾಲಯಕ್ಕೆ ನುಗ್ಗಿ ವಿಗ್ರಹಕ್ಕೆ ಒದ್ದು ವಿಕೃತಿ: ಸ್ಥಳೀಯರಿಂದ ಸಿಕ್ತು ಧರ್ಮದೇಟು

ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳಬಹುದೇ, ಡಾ ಪದ್ಮಿನಿ ಪ್ರಸಾದ್ ಹೇಳಿದ್ದೇನು

ಸಂಬಳ ಕೊಡಕ್ಕೆ ದುಡ್ಡಿಲ್ಲ, ಗುಂಡಿ ಮುಚ್ಚಲು ಹಣವಿಲ್ಲ, ಟ್ಯಾಕ್ಸ್ ದುಡ್ಡು ಏನ್ಮಾಡ್ತೀರಿ ಸ್ವಾಮಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ, ಪಿಯುಸಿನಾ: ಈ ಕನ್ ಫ್ಯೂಷನ್ ಸರಿ ಮಾಡಿ ಸಾರ್ ನೆಟ್ಟಿಗರಿಂದ ಟ್ರೋಲ್

ಮುಂದಿನ ಸುದ್ದಿ
Show comments