ಪಾಕಿಸ್ತಾನ ನರಕವಲ್ಲ, ಅಲ್ಲಿಯೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದ ರಮ್ಯಾ ಇದೀಗ ಸಿಆರ್`ಪಿಎಫ್ ಸಿಬ್ಬಂದಿ ಮೇಲೆ ನಡೆದ ನಕ್ಸಲರ ದಾಳಿ ವಿಷಯವಾಗಿ ಪ್ರದಾನಮಂತ್ರಿ ನರೇಂದ್ರಮೋದಿಯನ್ನ ಕಟು ಶಬ್ದಗಳಿಂದ ಪ್ರಶ್ನಿಸಿದ್ದಾರೆ.
ಮೋದಿಜಿ ಸಿಎಂ ಆಗಿದ್ದಾಗ ಸ್ನೂಪ್ ಗೇಟ್`ಗೆ ಬಳಸಿಕೊಂಡ ಗುಪ್ತಚರ ವ್ಯವಸ್ಥೆಯನ್ನ ಸಿಆರ್`ಪಿಎಫ್ ಯೋಧರ ರಕ್ಷಣೆಗೇಕೆ ಬಳಸಲಿಲ್ಲ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಏನಿದು ಸ್ನೂಪ್ ಗೇಟ್..?: ಗುಜರಾತ್`ನ ಗುಪ್ತಚರ ಸಂಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯನ್ನ ಬಳಸಿಕೊಂಡು ಅಂದಿನ ಗೃಹ ಸಚಿವ ಅಮಿತ್ ಶಾ ಯುವತಿಯೊಬ್ಬಳ ಮೇಲೆ ನಿಗಾ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.
ನವೆಂಬರ್ 2013ರಲ್ಲಿ ಕೋಬ್ರಾಪೋಸ್ಟ್ ಮತ್ತು ಗುಲೈಲ್ ಕೆಲ ಆಡಿಯೋ ತುಣುಕುಗಳನ್ನ `ದಿ ಸ್ಟಾಲ್ಕರ್’ ಹೆಸರಿನಲ್ಲಿ ರಿಲೀಸ್ ಮಾಡಿತ್ತು. ಆಡಿಯೋದಲ್ಲಿ ಅಮಿತ್ ಶಾ ಬೆಂಗಳೂರಿನ ಮಹಿಳೆ ಮೇಲೆ ಕಣ್ಗಾವಲಿಗೆ ಆದೇಶ ಮಾಡಿದ್ದು, ಸಾಹೇಬರ ಆದೇಶದಂತೆ ಈ ಕಣ್ಗಾವಲು ಆದೇಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸೂಚನೆ ಮೇರೆಗೆ ಯುವತಿಯನ್ನ ಮಾಲ್, ರೆಸ್ಟೋರೆಂಟ್, ಜಿಮ್`ಗಳಲ್ಲಿ ಹಿಂಬಾಲಿಸಿ ವಿಮಾನ, ಹೋಟೆಲ್ ಬುಕ್ಕಿಂಗ್, ತಾಯಿಯನ್ನ ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದ ಎಲ್ಲ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ರು ಎಂಬ ಆರೋಪ ಕೇಳಿಬಂದಿತ್ತು. ಅಮಿತ್ ಶಾ ಸಂಬೋಧಿಸಿದ ಸಾಹೇಬ್ ಬೇರಾರೂ ಅಲ್ಲ ನರೇಂದ್ರಮೋದಿ ಎಂದು ಕಾಂಗ್ರೆಸ್ ಆರೋಪಿಸಿತ್ತು.