Select Your Language

Notifications

webdunia
webdunia
webdunia
webdunia

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆಯಂತೆ!

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆಯಂತೆ!
ನವದೆಹಲಿ , ಮಂಗಳವಾರ, 13 ಮಾರ್ಚ್ 2018 (12:02 IST)
ನವದೆಹಲಿ: ತಾವು ಹೊಂದಿರುವ ಆಸ್ತಿಯ ಮೌಲ್ಯ 1000 ಕೋಟಿ ರೂ ಎಂದು ಘೋಷಿಸುವುದರ ಮೂಲಕ ಸಮಾಜವಾದಿ ಪಕ್ಷದ ಅಭ್ಯರ್ಥಿ ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಜಯಾ ಬಚ್ಚನ್‌ ಅವರು ತಾವು 1000 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. 2014ರಲ್ಲಿ ಬಿಜೆಪಿ ಸಂಸದ ರವೀಂದ್ರ ಕಿಶೋರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಯ ಮೌಲ್ಯ 800 ಕೋಟಿ ರೂ ಎಂದು ಘೋಷಿಸಿದ್ದು ಇದೀಗ ಬಿಜೆಪಿ ಸಂಸದ ರವೀಂದ್ರ ಕಿಶೋರ್ ಅವರನ್ನು ಹಿಂದಿಕ್ಕಿ ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆ ಎನಿಸಿಕೊಂಡಿದ್ದಾರೆ.


2012ರಲ್ಲಿ ಜಯಾಬಚ್ಚನ್ ಘೋಷಿಸಿದ್ದ ಆಸ್ತಿ ಮೌಲ್ಯ 492 ಕೋಟಿ ರೂ.ಗಳಾಗಿತ್ತು. ಆದರೆ ಈಗ  ಜಯಾ ಬಚ್ಚನ್ ಮತ್ತು ಅವರ ಪತಿ ಅಮಿತಾಭ್‌ ಬಚ್ಚನ್‌ ಅವರು 460 ಕೋಟಿ ರೂ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು, ಹಾಗೆ 540 ಕೋಟಿ ರೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ