Select Your Language

Notifications

webdunia
webdunia
webdunia
webdunia

ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್
ಆಂಧ್ರಪ್ರದೇಶ , ಭಾನುವಾರ, 2 ಜುಲೈ 2023 (11:02 IST)
ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಗದ್ದುಗೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ಗುದ್ದಾಟಕ್ಕೆ ಇಳಿದಿವೆ. ಅದಕ್ಕಾಗಿ ಮತದಾರರಿಗೆ ಬಂಪರ್ ಆಫರ್ಸ್ ಕೊಡ್ತಿದ್ದಾರೆ. ಎಲೆಕ್ಷನ್ ಗೆಲ್ಲೋಕೆ ರಾಜಕಾರಣಿಗಳು ಏನೇನೋ ತಂತ್ರ ಮಾಡ್ತಾರೆ.

ಭರವಸೆ ಕೊಡ್ತಾರೆ. ಅದಕ್ಕೆ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಕೂಡ ಹೊರತಲ್ಲ. ಯಾಕಂದ್ರೆ ಪವನ್ ಇದೀಗ ಕುಡುಕರಿಗೆ ನೀಡಿರುವ ಆಫರ್ ಹಾಗಿದೆ. ಮತದಾರರಿಗೆ ಪವನ್ ಕೊಟ್ಟ ಪವರ್ ಆಫರ್ ದೇಶಾದ್ಯಂತ ಚರ್ಚೆಯಲ್ಲಿದೆ. 

ಮತ ಪಡೆಯೋಕೆ ಕುಡಿಸಿ, ತಿನ್ನಿಸಿ, ಹಣ ಹಂಚಿ ಮತ ಹಾಕಿಸಿಕೊಳ್ಳೊ ರಾಜಕಾರಣಿಗಳನ್ನ ನೋಡಿದ್ದೀವಿ. ಹೀಗ್ ಮಾಡಿದ್ಮೇಲೂ ರಾಜಕಾರಣಿಗಳು ನಾವೇ ಕುಡಿಸಿದ್ದು ಅಂತ ಹೇಳಿಕೊಳ್ಳಲ್ಲ. ಆದರೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಮದ್ಯಪ್ರಿಯರನ್ನೇ ಬುಟ್ಟಿಗೆ ಹಾಕಿಕೊಳ್ಳುವಂಥ ಭರ್ಜರಿ ಆಫರ್ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆ ಇಳಿಸುವುದಾಗಿ ಹೇಳಿದ್ದಾರೆ. ಈ ಸುದ್ದಿಗೆ ಕುಡುಕರು ಒಂದ್ ಪೆಗ್ ಹೆಚ್ಚೇ ಗಂಟಲಿಗೇರಿಸಿ ಕೇಕೆ ಹಾಕಿದ್ದಾರೆ.

ಆಂಧ್ರ ವಿಧಾನಸಭೆ ಚುನಾವಣೆಗಾಗಿ ಪವನ್ ಪ್ರಚಾರ ಮಾಡ್ತಿದ್ದಾರೆ. ಇತ್ತೀಚೆಗೆ ವಾರಾಹಿ ಯಾತ್ರೆಯಲ್ಲಿ ಮಾತನಾಡ್ತಾ ಕುಡುಕರಿಗೆ ಕಲ್ಲಂಗಡಿ ತಿನ್ನಿಸಿದ್ದಾರೆ. ಹಾಲಿ ಸಿಎಂ ಜಗನ್ ಅಧಿಕಾರಕ್ಕೇರೋ ಮುನ್ನ ಮದ್ಯ ಬ್ಯಾನ್ ಮಾಡೋದಾಗಿ ಹೇಳಿದ್ರು. ಹಾಗೆ ಮಾಡದೇ ಬರೀ ತೆರಿಗೆ ಹೆಚ್ಚಿಸಿ, ಶ್ರಮಿಕರಿಗೆ ಹೊರೆಯಾಗಿದ್ರು. ಫಲಿತಾಂಶ ಕಳ್ ಬಟ್ಟಿ ಕುಡಿದು ಜನ ಹಾಳಾಗುತ್ತಿದ್ದಾರೆ. ಅದಕ್ಕೆ ನಾನು ಮದ್ಯದ ಬೆಲೆ ಕಮ್ಮಿ ಮಾಡ್ತೀನಿ ಎಂದಿದ್ದಾರೆ ಪವನ್. ಕುಡುಕರಿಗೆ ಮೆಗಾ ಕರುಣೆ ತೋರಿಸಿ ಆಂಧ್ರಕ್ಕೇ ಕಿಕ್ಕೇರಿಸಿದ್ದಾರೆ. ಈ ಪರಿಣಾಮ, ನಲ್ಲಿನಲ್ಲಿಯಲ್ಲಿ ಗುಂಡು ಗಲ್ಲಿಗಲ್ಲಿಯಲ್ಲಿ ಕುಡುಕರ ದಂಡು ಶುರುವಾಗೋದು ಗ್ಯಾರೆಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಸಚಿವ ಸಂಪುಟ ವಿಸ್ತರಣೆ : ತಡರಾತ್ರಿ ಶಿಂದೆ ನಡುವೆ ಮಹತ್ವದ ಚರ್ಚೆ