Publish Date: Mon, 09 Feb 2015 (18:31 IST)
Updated Date: Mon, 09 Feb 2015 (18:34 IST)
ಇತ್ತೀಚಿಗಷ್ಟೇ ಹೆಣ್ಣುಮಗುವಿನ ತಂದೆಯಾದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಗೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಶುಭಾಶಯ ಕೋರಿದ್ದಾರೆ.
ಫೆಬ್ರವರಿ 6 ರಂದು ಧೋನಿ ಪತ್ನಿ ಸಾಕ್ಷಿ ಗುರ್ಗಾಂವ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಪ್ರಥಮ ಮಗುವಿಗೆ ಜನ್ಮ ನೀಡಿದ್ದರು.
"ಎಮ್.ಎಸ್.ಧೋನಿ ಮತ್ತು ಸಾಕ್ಷಿ ಬದುಕಿನಲ್ಲಿ ದೇವತೆಯ ಪ್ರವೇಶವಾಗಿದ್ದಕ್ಕೆ ಅವರಿಗೆ ಅಭಿನಂದನೆಗಳು. ದೇವರು ನಿಮಗೆ ಆಶೀರ್ವದಿಸಲಿ", ಎಂದು 39 ವರ್ಷದ ಅಭಿಷೇಕ್ ಟ್ವಿಟ್ ಮಾಡಿದ್ದಾರೆ.
ಅಭಿಷೇಕ್ ಮತ್ತು ಅವರ ತಾರಾಪತ್ನಿ ಐಶ್ವರ್ಯ ಕೂಡ ಆರಾಧ್ಯ ಹೆಸರಿನ 3 ವರ್ಷದ ಹೆಣ್ಣುಮಗುವನ್ನು ಹೊಂದಿದ್ದಾರೆ.