Select Your Language

Notifications

webdunia
webdunia
webdunia
webdunia

ಪೊಲೀಸ್ ಠಾಣೆಗೆ ಹೋಗಿ ಬಂಧಿಸಿರೆಂದು ಪಟ್ಟು ಹಿಡಿದ ಆಪ್ ಶಾಸಕ

ಪೊಲೀಸ್ ಠಾಣೆಗೆ ಹೋಗಿ ಬಂಧಿಸಿರೆಂದು ಪಟ್ಟು ಹಿಡಿದ ಆಪ್ ಶಾಸಕ
ನವದೆಹಲಿ , ಸೋಮವಾರ, 19 ಸೆಪ್ಟಂಬರ್ 2016 (16:19 IST)
ಅಧಿಕಾರಕ್ಕೇರಿದಾಗಿನಿಂದಲೂ ಆಪ್ ಸಚಿವರು, ಶಾಸಕರು ಬಂಧನಕ್ಕೊಳಪಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು ಕೇಂದ್ರ ಸರ್ಕಾರದ ಪಿತೂರಿ ಎಂದು ಪ್ರತಿ ಬಾರಿ ಬಂಧನವಾದಾಗಲೂ ಆಪ್ ಸರ್ಕಾರ ದೂರುವುದು ಕೂಡ ಇದ್ದಿದ್ದೇ. ಆದರೆ ಇದೇ ಆಪ್ ಸರ್ಕಾರದ ಶಾಸಕನೊಬ್ಬ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ಬಂಧಿಸುವಂತೆ ಕೇಳಿಕೊಂಡ ಘಟನೆ ನಡೆದಿದೆ.

ಹೌದು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎದುರಿಸುತ್ತಿರುವ ಆಪ್ ಶಾಸಕ ಅಮಾನತುಲ್ಲಾ ಖಾನ್ ಸೋಮವಾರ ಜಾಮಿಯಾ ನಗರ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಬಂಧಿಸುವಂತೆ ಹೇಳಿದ್ದಾರೆ. ಆದರೆ ಪೊಲೀಸರು ಅದಕ್ಕೆ ಅಸಮ್ಮತಿ ಸೂಚಿಸಿದ್ದಾರೆ.
 
ನಾವು ಅವರನ್ನು ಬಂಧಿಸುವುದಿಲ್ಲ. ನಾವು ತನಿಖಾ ವರದಿಯನ್ನು ಅನುಸರಿಸಿ ಕ್ರಮ ಕೈಗೊಳ್ಳುತ್ತೇವೆ, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 
ಭಾನುವಾರ ಒತ್ತಡದ ಹಿನ್ನೆಲೆಯಲ್ಲಿ ಪೊಲೀಸರು ನನ್ನನ್ನು ಬಂಧಿಸ ಬಯಸಿದ್ದಾರೆ ಎಂದಿದ್ದ ಓಖ್ಲಾ ಶಾಸಕ ಇಂದು ಜನರ ಒತ್ತಡದಿಂದಾಗಿ ಪೊಲೀಸರು ನನ್ನನ್ನು ಬಂಧಿಸುತ್ತಿಲ್ಲ ಎನ್ನುತ್ತಿದ್ದಾರೆ. ಇದು ಸಾಮಾನ್ಯ ಜನರ ಗೆಲುವು. ಜನರ ಒತ್ತಡಕ್ಕೊಳಗಾದ ಜನರು ನನ್ನನ್ನು ಬಂಧಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. 
 
ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಖಾನ್ ವಾದವನ್ನು ತಳ್ಳಿ ಹಾಕಿದ್ದಾರೆ.  
 
ತನ್ನ ಬೆಂಬಲಿಗ ಗುಂಪಿನ ಜತೆ ಠಾಣೆಗೆ ಬಂದ ಶಾಸಕ ಬಂಧಿಸುವಂತೆ ಆಗ್ರಹಿಸಿದ ಎಂದು ತಿಳಿದು ಬಂದಿದೆ. 
 
ಖಾನ್ ಅತ್ತಿಗೆ ಎಂದು ಹೇಳುತ್ತಿರುವ ಮಹಿಳೆ ಕಳೆದ ವಾರ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಸೂದ್‌ನನ್ನು ಬಿಡುಗಡೆ ಮಾಡಿ ಎನ್‌ಡಿಎ ಸರ್ಕಾರ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿತ್ತು