Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್ ಗೆ ಕ್ಯಾನ್ಸರ್ ಲಕ್ಷಣ ಶುರುವಾಗಿದ್ಯಂತೆ, ಜಾಮೀನು ವಿಸ್ತರಿಸಲು ಕಾರಣ ನೀಡಿದ ನಾಯಕ

CM Kejriwal

Krishnaveni K

ನವದೆಹಲಿ , ಮಂಗಳವಾರ, 28 ಮೇ 2024 (09:31 IST)
ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಮಧ್ಯಂತರ ಜಾಮೀನಿನಲ್ಲಿ ಹೊರಗಡೆ ಬಂದಿದ್ದಾರೆ. ಆದರೆ ಅವರಿಗೆ ಈಗ ಕ್ಯಾನ್ಸರ್ ಲಕ್ಷಣ ಶುರುವಾಗಿದೆಯಂತೆ.

ಹೀಗೆಂದು ಎಎಪಿ ನಾಯಕಿ ಅತಿಶಿ ಹೇಳಿಕೆ ನೀಡಿದ್ದಾರೆ. ಇದೇ ಕಾರಣವನ್ನಿಟ್ಟುಕೊಂಡು ಮಧ್ಯಂತರ ಜಾಮೀನು ವಿಸ್ತರಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಗ್ಗೆ ಎಎಪಿ ನಾಯಕಿ ಅತಿಶಿ ವಿವರಣೆ ನೀಡಿದ್ದಾರೆ.

ಕೇಜ್ರಿವಾಲ್ ಜೈಲಿನಲ್ಲಿದ್ದಾಗಲೇ 6.-7 ಕಿ.ಲೋ. ತೂಕ ಕಳೆದುಕೊಂಡಿದ್ದರು. ಜೈಲಿನಿಂದ ಹೊರಬಂದ ಮೇಲೂ ಅವರ ತೂಕ ಹೆಚ್ಚಾಗಿಲ್ಲ. ಹೀಗಾಗಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದಾರೆ. ಈ ವೇಳೆ ಅವರಲ್ಲಿ ಕೀಟೋನ್ ಪ್ರಮಾಣ ಹೆಚ್ಚಳವಾಗಿದೆ. ಕೀಟೋನ್ ಪ್ರಮಾಣ ಹೆಚ್ಚಳವು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಲಕ್ಷಣವಾಗಿದೆ ಎಂದು ಅತಿಶಿ ಹೇಳಿದ್ದಾರೆ.

ಮೂತ್ರದಲ್ಲಿ ಕೀಟೋನ್ ಪ್ರಮಾಣ ಹೆಚ್ಚಳವಾದಂತೆ ಅಸಾಮಾನ್ಯ ರಕ್ತದೊತ್ತಡ, ಗ್ಲುಕೋಸ್ ಕೂಡಾ ಹೆಚ್ಚಳವಾಗಿದೆ. ಇದರಿಂದ ಮಧುಮೇಹ ಹೆಚ್ಚಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಹೀಗಾಗಿ ಅವರಿಗೆ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿರುವುದರಿಂದ 7 ದಿನಗಳವರೆಗೆ ಮಧ್ಯಂತರ ಜಾಮೀನು ಅರ್ಜಿ ವಿಸ್ತರಣೆ ಮಾಡಿ ಎಂದು ಕೋರ್ಟ್ ಗೆ ಕೇಜ್ರಿವಾಲ್ ಪರ ವಕೀಲರು ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಜೂನ್ 1 ರಂದು ಕೇಜ್ರಿವಾಲ್ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಲಿದ್ದು, ಜೂನ್ 2 ರಂದು ಮತ್ತೆ ಅವರು ತಿಹಾರ್ ಜೈಲಿಗೆ ಹೋಗಬೇಕಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮಗ ಪ್ರಜ್ವಲ್ ಪ್ರತ್ಯಕ್ಷರಾದ ಬೆನ್ನಲ್ಲೇ ಭವಾನಿ ರೇವಣ್ಣಗೆ ಎದುರಾದ ಹೊಸ ಸಂಕಷ್ಟ