Publish Date: Mon, 23 Jan 2017 (07:40 IST)
Updated Date: Mon, 23 Jan 2017 (07:44 IST)
ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಗೋವಾ ಮತ್ತು ಪಂಜಾಬ್‌ನಲ್ಲಿ ಅಧಿಕಾರ ವಿಸ್ತರಿಸುವ ಮಹಾದಾಸೆ ಹೊತ್ತಿರುವ ಆಪ್ ಅಬ್ಬರದ ಪ್ರಚಾರವನ್ನು ಮುಂದುವರೆಸಿದೆ.
ಭಾನುವಾರ ಗೋವಾದ ಶಿರೋಡಾದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಗೋವಾದಲ್ಲಿ ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ನಾವು ಅಧಿಕಾರ ಹಿಡಿದರೆ ಅದಕ್ಕೆ ಇತಿಶ್ರೀ ಹಾಡುತ್ತೇವೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ವ್ಯಾಪಕ ಗಣಿಗಾರಿಕೆ ನಡೆದಿತ್ತು. ಇದರ ವಿರುದ್ಧ ಧ್ವನಿ ಎತ್ತಿ ಅಧಿಕಾರ ಹಿಡಿದಿದ್ದ ಬಿಜೆಪಿ ಯಾರ ವಿರುದ್ಧ ಕ್ರಮವನ್ನು ಕೂಡ ಕೈಗೊಳ್ಳಲಿಲ್ಲ. ಇದರಿಂದ ಬಿಜೆಪಿ ಮೇಲೆ ಸಹ ಜನರೀಗ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ