Select Your Language

Notifications

webdunia
webdunia
webdunia
webdunia

ಬಿರಿಯಾನಿಯ ವಿಚಾರಕ್ಕೆ ಜಗಳವಾಡಿದ ಯುವಕ ಹಾಗೂ ಯುವತಿ. ಕೊನೆಗೆ ಆಗಿದ್ದೇನು?

ಬಿರಿಯಾನಿಯ ವಿಚಾರಕ್ಕೆ ಜಗಳವಾಡಿದ ಯುವಕ ಹಾಗೂ ಯುವತಿ. ಕೊನೆಗೆ ಆಗಿದ್ದೇನು?
ಚೆನ್ನೈ , ಶನಿವಾರ, 23 ಫೆಬ್ರವರಿ 2019 (13:06 IST)
ಚೆನ್ನೈ : ಬಿರಿಯಾನಿಯ ವಿಚಾರಕ್ಕೆ ಜಗಳವಾಡಿದ ಯುವತಿಯೊಬ್ಬಳನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಕೊಯಂಬೆಡು ಹೂವಿನ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಯುವತಿ, ಕೆಲಸ ಮುಗಿಸಿ ಮನೆಗೆ ಹೋಗುವಾಗ ಹೋಟೆಲ್ ನಿಂದ ಬಿರಿಯಾನಿ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಮನೆಯಲ್ಲಿ ಬಿರಿಯಾನಿ ತಿನ್ನುವಾಗ ಯುವತಿ ಬಿರಿಯಾನಿಯಲ್ಲಿ ಪೀಸ್ ಗಳು ಇರಲಿಲ್ಲ. ಈ ಬಗ್ಗೆ ಆಕೆ ಯುವಕನನ್ನು ಪ್ರಶ್ನಿಸಿದ್ದಾಳೆ. ಇದರಿಂದ ಅವರಿಬ್ಬರ ನಡುವೆ ಜಗಳ ನಡೆದಿದೆ.

 

ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಸಿಟ್ಟಿಗೆದ್ದ ಯುವಕ, ಯುವತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನಿಗಾಗಿ ಬಲೆ ಬೀಸಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರರ ಭೀಕರ ಹತ್ಯೆ: ಬೆಚ್ಚಿದ ಗುಂಬಜ ನಗರಿ