Select Your Language

Notifications

webdunia
webdunia
webdunia
webdunia

ರೈಲು ಚಲಿಸುತ್ತಿದ್ದಾಗ ಪ್ಲಾಟ್ಫಾರ್ಮ್ನಿಂದ ಬಿದ್ದು ಮಹಿಳೆ ಸಾವು

ರೈಲು
ಮುಂಬೈ : ನಾಗ್ಪುರ ರೈಲು ನಿಲ್ದಾಣದಲ್ಲಿ ರೈಲು ಚಲಿಸುತ್ತಿದ್ದ ವೇಳೆ ಪ್ಲಾಟ್ಫಾರ್ಮ್ನಿಂದ ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಗಾಯತ್ರಿ ಸ್ವಾಮಿವಿವೇಕಾನಂದ ಪಾಂಡೆ ಮೃತ ಮಹಿಳೆ. ಈಕೆ ದಾನಪುರ- ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ನಾಗ್ಪುರ ನಿಲ್ದಾಣದಲ್ಲಿ ತಿಂಡಿಯನ್ನು ತೆಗೆದುಕೊಳ್ಳಲು ರೈಲು ನಿಂತಿದ್ದಾಗ ಇಳಿದಿದ್ದಾಳೆ. ಆದರೆ ಆಕೆ ತಿಂಡಿಯನ್ನು ತೆಗೆದುಕೊಳ್ಳುತ್ತಿದ್ದಾಗಲೇ ರೈಲು ಚಲಿಸಲು ಪ್ರಾರಂಭವಾಗಿದೆ.

ಇದನ್ನು ಗಮನಿಸಿದ ಗಾಯತ್ರಿ ರೈಲನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಆದರೆ ಆಕೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಜಾರಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ತಲೆಗೆ ಗಂಭೀರ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ವೈಟ್‍ಫಿಲ್ಡ್ ಮೆಟ್ರೋ ಸಂಚಾರ ಸದ್ಯದಲ್ಲೇ ಮುಕ್ತ