ಅಮರಾವತಿ : ಗೆಳತಿ ಮದುವೆಗೆ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಉಯತ್ನಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲ್ಲಪಾಡು ಗ್ರಾಮದಲ್ಲಿ ನಡೆದಿದೆ.
ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಕೃಷ್ಣಾಪುರಂ ಗ್ರಾಮದ ತಪಸ್ವಿ (20) ಮೃತ ಯುವತಿ. 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಪಸ್ವಿಗೆ ವಿಜಯವಾಡ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಜ್ಞಾನೇಶ್ವರ್ ಪರಿಚಯವಾಗಿದ್ದ.
ಇತ್ತೀಚೆಗೆ ತಪಸ್ವಿಯನ್ನು ಜ್ಞಾನೇಶ್ವರ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ತಪಸ್ವಿ ನಿರಾಕರಿಸಿದ್ದಳು. ತಪಸ್ವಿ ಮದುವೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಜ್ಞಾನೇಶ್ವರ್ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಕೋಣೆಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದ.
ಆ ವೇಳೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಜ್ಞಾನೇಶ್ವರ್ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಇದನ್ನು ನೋಡಿದ ತಪಸ್ವಿಯ ರೂಮ್ಮೇಟ್ ಸಹಾಯ ಪಡೆಯಲು ಹೊರಗೆ ಧಾವಿಸಿದ್ದಾಳೆ. ತಪಸ್ವಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.