ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ !?

Webdunia
ಸೋಮವಾರ, 5 ಜೂನ್ 2023 (11:56 IST)
ಜೈಪುರ : ಮಹಿಳೆಯೊಬ್ಬಳು ತನ್ನ 4 ಮಕ್ಕಳನ್ನು ಧಾನ್ಯ ಸಂಗ್ರಹಿಸುವ ಡ್ರಮ್ನಲ್ಲಿ ಕೂಡಿ ಹಾಕಿ ಕೊಂದ ಬಳಿಕ ತಾನೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಮಂಡ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜೇಥರಾಮ್ ಅವರ ಪತ್ನಿ ಊರ್ಮಿಳಾ ಶನಿವಾರ ತನ್ನ 4 ಮಕ್ಕಳೊಂದಿಗೆ ಮನೆಯಲ್ಲಿದ್ದಳು.

ಆಕೆಯ ಪತಿ ಜೇಥರಾಮ್ ಕೂಲಿಗಾಗಿ ಜೋಧಪುರಕ್ಕೆ ಹೋಗಿದ್ದ ಸಂದರ್ಭ ಮಧ್ಯಾಹ್ನ ಊರ್ಮಿಳಾ ತನ್ನ ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3), ಮತ್ತು ಮನಿಶಾ (2) ರನ್ನು ಧಾನ್ಯದ ಡ್ರಮ್ನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾಳೆ. ಬಳಿಕ ಮನೆಯೊಳಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಸಂಜೆಯವರೆಗೂ ಮಕ್ಕಳು ಮತ್ತು ಮಹಿಳೆ ಕಾಣದಿದ್ದಾಗ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಅವರ ಸಂಬಂಧಿಕರು ಊರ್ಮಿಳಾ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಉರ್ಮಿಳಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಕ್ಕಳನ್ನು ಧಾನ್ಯದ ಡ್ರಮ್ನಲ್ಲಿ ಕೂಡಿಹಾಕಿರುವುದು ಬೆಳಕಿಗೆ ಬಂದಿದೆ. 

ತಕ್ಷಣ ಗ್ರಾಮಸ್ಥರು ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ 5 ಮೃತದೇಹಗಳನ್ನು ಕಲ್ಯಾಣಪುರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಉರ್ಮಿಳಾ ಚಿಕ್ಕಪ್ಪ ದುರ್ಗಾರಾಮ್ ಕಳೆದ 5 ವರ್ಷಗಳಿಂದ ಆಕೆಯ ಪತಿ ಹಾಗೂ ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments