Select Your Language

Notifications

webdunia
webdunia
webdunia
webdunia

ಅತ್ಯಾಚಾರ ಮಾಡಿ ಬೆತ್ತಲೆ ವಿಡಿಯೋ ತೋರಿಸಿ 30 ಲಕ್ಷ ದೋಚಿದ..!

ಅತ್ಯಾಚಾರ ಮಾಡಿ ಬೆತ್ತಲೆ ವಿಡಿಯೋ ತೋರಿಸಿ 30 ಲಕ್ಷ ದೋಚಿದ..!
ಮುಂಬೈ , ಸೋಮವಾರ, 24 ಜುಲೈ 2017 (11:54 IST)
ವ್ಯಕ್ತಿಯೊಬ್ಬ ಜೀವವಿಮಾ ಏಜೆಂಟ್ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಅತ್ಯಾಚಾರದ ಪೋಟೋ ತೆಗೆದು ಅದನ್ನ ತೋರಿಸಿ 30 ಲಕ್ಷ ರೂಪಾಯಿ ದೋಚಿರುವ ಘಟನೆ ಮುಂಬೈನ ಮೇಘ್ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಅಂಧೇರಿ ನಿವಾಸಿಯಾದ ಜೀವ ವಿಮಾ ಏಜೆಂಟ್ ಮಹಿಳೆಯನ್ನ ಹೋಟೆಲ್`ಗೆ ಕರೆಸಿಕೊಂಡ ವ್ಯಕ್ತಿ ಬಳಿಕ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಮಹಿಳೆಯ ಮನೆಗೆ ಬಂದ ಕಾಮುಕ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಅಷ್ಟು ಸಾಲದೆಂಬಂತೆ ಅತ್ಯಾಚಾರದ ಫೋಟೊ ಕ್ಲಿಕ್ ಮಾಡಿ ಇಟ್ಟುಕೊಂಡು ಗಂಡನಿಗೆ ತೋರಿಸುವುದಾಗಿ ಬೆದರಿಸಿ 30 ಲಕ್ಷ ರೂಪಾಯಿ ಹಣ, ಒಡವೆಗಳನ್ನ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ವಿರುದ್ಧ ಅತ್ಯಾಚಾರ, ಸುಲಿಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದರ ಜೊತೆಗೆ ಆರೋಪಿಯೂ ಮಹಿಳೆಗೆ 30 ಲಕ್ಷ ರೂ. ಚೆಕ್ ಸಹ ನೀಡಿರುವುದು ಹೊಸ ಅನುಮಾನ ಮೂಡಿಸಿದ್ದು, ಇವರ ನಡುವೆ ಮೊದಲೇ ಪರಿಚಯವಿದ್ದು, ಅತ್ಯಾಚಾರವೋ ಸಮ್ಮತಿ ಲೈಂಗಿಕತೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾ ರೆ ಗಾ ಮಾ ಪಾ ಮಾಜಿ ಸ್ಪರ್ಧಿ ಝೈನ್‌ ಅಲಿ ನಿಗೂಢ ಸಾವು