ಮಹಿಳೆಯ ದಯನೀಯ ಪರಿಸ್ಥಿತಿಗೆ ಮೀಡಿದ ಸಚಿವರು ತಮಗೆ ಮತ್ತು ಪತ್ನಿಗೆ ಕಾದಿರಿಸಿದ್ದ ಎಕ್ಸ್‌ಎಲ್ ಸೀಟನ್ನು ಅವರಿಗೆ ಬಿಟ್ಟುಕೊಟ್ಟು ತಾವು ಸಾಮಾನ್ಯ ದರ್ಜೆ ಸೀಟಿನಲ್ಲಿ ಪ್ರಯಾಣಿಸಿದ ಘಟನೆ ವರದಿಯಾಗಿದೆ.
ಒಂದರ್ಧ ಗಂಟೆ ಬಸ್ ಪ್ರಯಾಣದಲ್ಲಿ ನಾವು ಅಸಹಾಯಕರಿಗೆ ಸೀಟು ಬಿಟ್ಟು ಕೊಡಲು ಮೀನಮೇಷ ಎಣಿಸುತ್ತೇವೆ. ಆದರೆ ವಿಮಾನಯಾನ ಸಚಿವ ವಿಮಾನದಲ್ಲಿಯೇ ಸೀಟು ಬಿಟ್ಟುಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾಯಿ- ಮಗಳು ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದರು. ಯುವತಿಯ ತಾಯಿ ಕಾಲು ನೋವಿನಿಂದ ಬಳಲುತ್ತಿದ್ದು ಮಡಚಲಾಗುತ್ತಿರಲಿಲ್ಲ. ಬೆಂಗಳೂರಿನಿಂದ ಪ್ರಯಾಣಿಸುವಾಗ ಅವರಿಗೆ ಸಚಿವರಿಗೆ ಕಾದಿರಿಸಲಾಗಿದ್ದ ಸೀಟಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನ ಕೋಲ್ಕತ್ತಾದಲ್ಲಿ ತಂಗಿ ಪ್ರಯಾಣ ಮುಂದುವರೆಸುವಾಗ ಸಚಿವರು ಆಗಮಿಸಿದ್ದರು.
ಸಚಿವರ ಈ ದೊಡ್ಡತನಕ್ಕೆ ಯುವತಿ ಟ್ವಿಟರ್ ಮೂಲಕ ಧನ್ಯವಾದಗಳನ್ನರ್ಪಿಸಿದ್ದಾಳೆ. ತಮ್ಮ ಫಸ್ಟ್ ಕ್ಲಾಸ್ ಸೀಟನ್ನು ನನಗೆ ಮತ್ತು ನನ್ನ ತಾಯಿಗೆ ಬಿಟ್ಟುಕೊಟ್ಟು ಸಚಿವರು ತಾವು ದ್ವಿತೀಯ ದರ್ಜೆ ಸೀಟ್‌ನಲ್ಲಿ ಪ್ರಯಾಣಿಸಿದ್ದು ಅಚ್ಛೇದಿನ್ ಎಂದಿದ್ದಾಳೆ ಯುವತಿ.