Select Your Language

Notifications

webdunia
webdunia
webdunia
webdunia

ಮೋದಿ ಅಭಿಮಾನದಿಂದ ಕೆಲಸಕ್ಕೆ ಕುತ್ತು

ಮೋದಿ ಅಭಿಮಾನದಿಂದ ಕೆಲಸಕ್ಕೆ ಕುತ್ತು
ನವದೆಹಲಿ , ಶನಿವಾರ, 27 ಆಗಸ್ಟ್ 2016 (11:00 IST)
ಪ್ರಧಾನಿ ಮೋದಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮೇಲಿನ ಅತಿಯಾದ ಅಭಿಮಾನ ಯುವಕನೊಬ್ಬನ ಕನಸಿಗೆ ತಣ್ಣೀರೆರಚಿದೆ. ಅಷ್ಟಕ್ಕೂ ಆಗಿದ್ದಾದರು ಏನು? ತಿಳಿಯಲು ಮುಂದೆ ಓದಿ.
 
ಮಧ್ಯಪ್ರದೇಶದ ಸೌರವ್ ಬಿಲ್‌ಜ್ಞಾನ್ ಎಂಬ ಯುವಕನಿಗೆ ಸೇನೆ ಸೇರಿ ದೇಶಸೇವೆ ಮಾಡಬೇಕೆಂಬ ಆಸೆ ಇತ್ತು. ಸೇನಾ ನೇಮಕಾತಿಯಲ್ಲಿಯೂ ಆತ ಪಾಲ್ಗೊಂಡಿದ್ದ. ಆದರೆ ಆತನನ್ನು ಅನರ್ಹಗೊಳಿಸಲಾಗಿದೆ. ಕಾರಣ ಆತ ತನ್ನ ಎದೆ ಮೇಲೆ ಹಾಕಿಕೊಂಡಿದ್ದ ಮಧ್ಯಪ್ರದೇಶ್ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ಮೋದಿ ಹಚ್ಚೆ.
 
2014ರ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಲೋಕಸಭಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅವರಿಂದ ಪ್ರಭಾವಿತನಾಗಿದ್ದ ಸೌರವ್ ಬಿಲ್‌ಜ್ಞಾನ್ ಸೂರ್ಯ ಚಂದ್ರರಿರುವವರೆಗೆ ಶಿವರಾಜ್ ಮಾಮಾ ಮತ್ತು ಮೋದಿ ಹೆಸರು ಶಾಶ್ವತ ಎಂದು ಬರೆಸಿಕೊಂಡಿದ್ದ. 
 
ಸೇನಾ ನೇಮಕಾತಿ ಶಿಬಿರದಲ್ಲಿ ಈ ಹಚ್ಚೆಯನ್ನು ನೋಡಿದ ಅಧಿಕಾರಿಗಳು ಆತನ ಅರ್ಜಿಯನ್ನು ವಜಾಗೊಳಿಸಿದ್ದಾರೆ.
 
ಸೌರವ್ ಈಗ ಪ್ರಧಾನಿ ಮೋದಿ ಮತ್ತು ಚೌಹಾಣ್ ಅವರನ್ನು ಭೇಟಿಯಾಗಿ ತಾನು ಅನರ್ಹನಾಗಿರುವುದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳ ಬಯಸಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ:ಇಂದು ಸರ್ವಪಕ್ಷ ಸಭೆ ಕರೆದ ಸಿಎಂ ಸಿದ್ದರಾಮಯ್ಯ