ತಮಿಳುನಾಡು ರಾಜ್ಯದ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಮ್‌ನ ಮುಖಂಡರಾದ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ 1924ರ ಜೂನ್ 3 ರಂದು ಜನಿಸಿದರು.
"ಕಲೈಗ್ನಾರ್" ಎಂದು ಖ್ಯಾತರಾಗಿರುವ ಎಂ. ಕರುಣಾನಿಧಿ ದೇಶದ ಪ್ರಮುಖ ರಾಜಕಾರಣಿಯಾಗಿದ್ದಲ್ಲದೇ ಒಬ್ಬ ಉತ್ತಮ ಕವಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. 1969ರಲ್ಲಿ ಡಿಎಂಕೆ ಸಂಸ್ಥಾಪಕ ಸಿ.ಎನ್.ಅಣ್ಣಾದೊರೈ ನಿಧನದ ನಂತರ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.
ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕುವಲೈಯಲ್ಲಿ 1924ರ ಜೂನ್ 3 ರಂದು ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿಗಳಿಗೆ ಹೆಮ್ಮೆಯ ಪುತ್ರನಾಗಿ ಜನಿಸಿದರು
ಕರುಣಾನಿಧಿ ಖ್ಯಾತ ಭಾಷಣಕಾರ ಅಳಗಿರಿ ಸ್ವಾಮಿಯವರ ಭಾಷಣಗಳಿಂದ ಪ್ರಭಾವಿತರಾಗಿ 14ನೇ ವಯಸ್ಸಿನಲ್ಲಿಯೇ ರಾಜಕೀಯ ರಂಗ ಪ್ರವೇಶಿಸಿದರು. 1932ರಿಂದಲೇ ಅನೇಕ ಚಳುವಳಿಗಳಲ್ಲಿ ಭಾಗವಹಿಸಿ ವಿದ್ಯಾರ್ಥಿ ಸಂಘಟನೆಗಳನ್ನು ಕಟ್ಟಿದರು. ಮಾಸಿಕ ಪತ್ರಿಕೆಯನ್ನು ತೆಗೆದು ಮುರಸೋಳಿ ಎನ್ನುವ ಹೆಸರಿಟ್ಟರು.
ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು. 1962ರಲ್ಲಿ ವಿರೋಧಪಕ್ಷದ ಉಪನಾಯಕರಾದರು. ನಂತರ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಸಚಿವರಾದರು. 1969ರಲ್ಲಿ ಅಣ್ಣದೊರೈ ನಿಧನದ ನಂತರ ತಮಿಳುನಾಡಿನ ಮುಖ್ಯಮಂತ್ರಿಯಾದರು
ಕರುಣಾನಿಧಿಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಐದು ಬಾರಿ ಮುಖ್ಯಮಂತ್ರಿಯಾದರು. 60 ವರ್ಷಗಳ ಚುನಾವಣೆ ಇತಿಹಾಸದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.