Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ 9 ಜನರ ಮೇಲೆ ಆ್ಯಸಿಡ್ ದಾಳಿ

ಕುಟುಂಬ
ಕಪುರ್ತಲಾ , ಮಂಗಳವಾರ, 27 ಡಿಸೆಂಬರ್ 2016 (10:19 IST)
ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಯಲ್ಲಿ ಒಂದೇ ಕುಟುಂಬದ 9 ಮಹಿಳೆಯರಿಗೆ ಆ್ಯಸಿಡ್ ಎರಚಿದ ಅಮಾನವೀಯ ಘಟನೆ ಪಂಜಾಬ್‌ನ ಕಪೂರ್ತಲಾದಲ್ಲಿ ನಡೆದಿದೆ. 
ಬೂಯಿ ಗ್ರಾಮದ ಅಕಾಲಿ ಸರಪಂಚ್ ವಿನೋದ್ ಸೆಹ್ಗಲ್ ಹಾಗೂ ಮತ್ತೊಂದು ಗ್ರಾಮದ ಗುಂಪಿನ ನಡುವೆ ಭೂಮಿಗೆ ಸಂಬಂಧಿಸಿದಂತೆ ಘರ್ಷಣೆ ನಡೆದಿತ್ತು. 
 
ಗಲಾಟೆ ತಾರಕಕ್ಕೇರಿ ವಿನೋದ್ ಪತ್ನಿ ಮತ್ತು 8 ಮಂದಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಅವರಲ್ಲಿ 7 ಜನರು ಕೂಲಿ ಕಾರ್ಮಿಕರಾಗಿದ್ದು ಮತ್ತಿಬ್ಬರು ವಿನೋದ್ ಪರಿವಾರದ ಸದಸ್ಯರಾಗಿದ್ದಾರೆ. 
 
ಪೀಡಿತರಲ್ಲಿ ಒಬ್ಬ ಅಪ್ರಾಪ್ತೆ ಕೂಡ ಇದ್ದಾಳೆ. ಘಟನೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಅವರೆಲ್ಲರನ್ನು ಜಲಂಧರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಶ್ವರ್ ಸ್ವಾಮೀಜಿಗೆ ಬೆದರಿಕೆ: ಉಗ್ರಪ್ಪ ವಿರುದ್ಧ ಪ್ರತಿದೂರು!