Select Your Language

Notifications

webdunia
webdunia
webdunia
webdunia

ನಿರ್ಮಾಣ ಹಂತದ ಕಟ್ಟಡ ಕುಸಿದು 9 ಸಾವು

ನಿರ್ಮಾಣ ಹಂತದ ಕಟ್ಟಡ ಕುಸಿದು 9 ಸಾವು
ಪುಣೆ , ಶುಕ್ರವಾರ, 29 ಜುಲೈ 2016 (17:45 IST)
ನಿರ್ಮಾಣ ಹಂತದ ಕಟ್ಟಡ ಕುಸಿದು 9 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಬಾಲೆವಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ಕುಸಿತಗೊಂಡಿರಬಹುದೆಂದು ಶಂಕಿಸಲಾಗಿದ್ದು ಕಟ್ಟಡದ ಒಳಗೆ ಮತ್ತಷ್ಟು ಜನರು ಸಿಕ್ಕಿ ಹಾಕಿಕೊಂಡಿರುವ ಶಂಕೆ ಇದೆ.

ಬಹುಮಹಡಿ ಕಟ್ಟಡದ 14ನೇ ಅಂತಸ್ತಿನ ಕಾಮಗಾರಿ ನಡೆಯುತ್ತಿದ್ದು ಅದರಡಿ ಸಿಲುಕಿದ ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪುಣೆಯ ಮೇಯರ್ ಪ್ರಶಾಂತ್ ಜಗಪತ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ತೀರ್ಪು: ಕನ್ನಡ ಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್‌