Webdunia - Bharat's app for daily news and videos

Install App

13 ವರ್ಷದ ವಿದ್ಯಾರ್ಥಿನಿ ಮೇಲೆ 8 ಶಿಕ್ಷಕರಿಂದ 2 ವರ್ಷಗಳವರೆಗೆ ಗ್ಯಾಂಗ್‌ರೇಪ್

Webdunia
ಶನಿವಾರ, 25 ಮಾರ್ಚ್ 2017 (15:37 IST)
13 ವರ್ಷದ ವಿದ್ಯಾರ್ಥಿನಿಯ ಮೇಲೆ ಎಂಟು ಮಂದಿ ಶಿಕ್ಷಕರಿಂದ ಎರಡು ವರ್ಷಗಳಿಂದ ನಿರಂತರ ರೇಪ್ ನಡೆದಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
 
ಬಾಲಕಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ಆರೋಪಿ ಶಿಕ್ಷಕರು ಬಾಲಕಿಗೆ ಗರ್ಭಪಾತವಾಗುವಂತಹ ಮಾತ್ರೆಗಳನ್ನು ನೀಡುತ್ತಿದ್ದರೂ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರವೆಸಗಿರುವ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಆರೋಪಿಗಳಿಗೆ ಹೆದರಿದ ಬಾಲಕಿ ಮೌನವಾಗಿದ್ದಳು ಎನ್ನಲಾಗಿದೆ.  
 
ಆದರೆ, ಕೆಲ ದಿನಗಳ ಹಿಂದೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಕಂಡು ಬಂದಿದೆ. ವೈದ್ಯರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
 
ಪೊಲೀಸರು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ಆಘಾತ ಸಂಗತಿ ಬಹಿರಂಗವಾಗಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಎಂಟು ಶಿಕ್ಷಕರನ್ನು ವಶಕ್ಕೆ ತೆಗೆದುಕೊಂಡು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

Rahul Gandhi: ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ಅನಾಹುತವಾಗುತ್ತದೆ: ಕರ್ನಾಟಕ ಬಿಜೆಪಿ ಆರೋಪ

ಮುಂದಿನ ಸುದ್ದಿ
Show comments