Webdunia - Bharat's app for daily news and videos

Install App

ಬಿಜೆಪಿ ಸೇರಿದರೂ ಕಾಂಗ್ರೆಸ್ ನಂಟು ಸುಲಭದಲ್ಲಿ ಬಿಡಲ್ಲ: ಎಸ್ ಎಂ ಕೃಷ್ಣ

Webdunia
ಶನಿವಾರ, 25 ಮಾರ್ಚ್ 2017 (15:20 IST)
ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಮೇಲೆ ಮುನಿಸಿಕೊಂಡು ಬಿಜೆಪಿ ಸೇರಿಕೊಂಡ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಗೆ ಇಂದೂ ಹಳೆಯ ಪಕ್ಷದ ಮೇಲಿನ ನಂಟು ಬಿಡಲು ಕಷ್ಟವಂತೆ.

 

ಕಾಂಗ್ರೆಸ್ ನಲ್ಲಿ ಸುಮಾರು 46 ವರ್ಷವಿದ್ದೆ. ಅಷ್ಟು ಬೇಗ ಆ ಪಕ್ಷದ ನಂಟು ಬಿಡಲು ಸಾಧ್ಯವಾಗಲ್ಲ. ಅಷ್ಟು ಬೇಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷವನ್ನು ನನ್ನ ಪಕ್ಷವೆಂದು ಒಪ್ಪಿಕೊಳ್ಳಲು ಕಷ್ಟ ಎಂದು ಕೃಷ್ಣ ಹೇಳಿದ್ದಾರೆ.

 
ಹಾಗಿದ್ದರೂ, ಬಿಜೆಪಿಯಲ್ಲಿ ತಮಗೆ ದೊರೆತ ಅಭೂತಪೂರ್ವ ಸ್ವಾಗತದಿಂದ ಖುಷಿಯಾಗಿದ್ದಾರೆ. ಇದು ಇನ್ನು ಮುಂದೆ, ನಮ್ಮ ಪಕ್ಷ ಎಂದಿದ್ದಾರೆ.  ಅಲ್ಲದೆ, ಬಿಜೆಪಿಯಲ್ಲಿರುವ ಶಿಸ್ತು ತುಂಬಾ ಇಷ್ಟವಾಯಿತು ಎಂದಿದ್ದಾರೆ.

 
ಇದೇ ವೇಳೆ ತನಗಿಂತ ಕಿರಿಯ ಅಮಿತ್ ಶಾ ಮುಂದೆ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಕೃಷ್ಣರದ್ದು ಎಂದು ಟೀಕಿಸಿದ್ದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಅವರು, ಮೊದಲು ಅವರು ತಮ್ಮ ಬೆನ್ನು ನೋಡಿಕೊಳ್ಳಿ. ತಮ್ಮ ನಾಯಕನ ವಯಸ್ಸು ಎಷ್ಟೆಂದು ನೋಡಿಕೊಳ್ಳಲಿ ಎಂದಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam terror attack: ಇಸ್ರೇಲ್ ಬಳಿಕ ಭಾರತಕ್ಕೆ ಬಂದಿಳಿದ ಅಮೆರಿಕಾದ ಯುದ್ಧ ವಿಮಾನ: ಏನಿದರ ಹಿಂದಿನ ಲೆಕ್ಕಾಚಾರ

Mangaluru: ಪಹಲ್ಗಾಮ್ ಉಗ್ರರ ದಾಳಿಯನ್ನು ಸಮರ್ಥಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್

Gold Price today: ಚಿನ್ನದ ದರ ಇಂದು ಮತ್ತೆ ಏರಿಕೆ, ಎಷ್ಟಾಗಿದೆ ನೋಡಿ

Pehalgam: ಪಹಲ್ಗಾಮ್ ನಲ್ಲಿ ರಕ್ತಪಾತ ಮಾಡಿದ ಉಗ್ರರು ಈಗ ಎಲ್ಲಿದ್ದಾರೆ ಎಂಬುದು ಪತ್ತೆ

Viral Video: ಈ ಮಕ್ಕಳಿಗೆ ಯೋಧರ ಮೇಲೆ ಅದೆಂಥಾ ಗೌರವ ನೀವೇ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments