ಅಪ್ರಾಪ್ತ ಹುಡುಗಿಗೆ ಅಮಲು ಪದಾರ್ಥ ನೀಡಿ 8 ಜನ ಕಾಮುಕರಿಂದ ಅತ್ಯಾಚಾರ

Webdunia
ಸೋಮವಾರ, 3 ಸೆಪ್ಟಂಬರ್ 2018 (12:13 IST)
ಚೆನ್ನೈ : ಚೆನ್ನೈನ ಅಯನಾವರಂನಲ್ಲಿ  ಅಪ್ರಾಪ್ತ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆದ  ಘಟನೆಯಿಂದ ಜನ ಚೇತರಿಸಿಕೊಳ್ಳುವ ಮೊದಲೇ ಪುದುಚೇರಿಯಲ್ಲಿ 17 ವರ್ಷ ವಯಸ್ಸಿನ ಹುಡುಗಿಯ ಮೇಲೆ 8 ಜನ ಕಾಮುಕರು ಅತ್ಯಾಚಾರ ಎಸಗಿದ ಮತ್ತೊಂದು ಘಟನೆ ವರದಿಯಾಗಿದೆ.


ಪುದುಚೆರಿಯಲ್ಲಿರುವ ರೆಡಿಯಾರ್ಪಾಲಾಯಂ ನಿಂದ ಬಂದ ಬಾಲಕಿಯೊಬ್ಬಳು  ವಿಲುಪ್ಪುರಮ್ ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಆಕೆಗೆ ಪರಿಚಯವಿರುವ ವಿಕ್ಕಿ ಎಂಬಾತ ಸಿಕ್ಕಿದ್ದು, ಆತ ಬಾಲಕಿಯನ್ನು ಒಂಟಿ ಮನೆಯೊಂದಕ್ಕೆ ಕರೆದೊಯ್ದು ಮತ್ತು ಬರುವ ಔಷಧ ನೀಡಿ ತನ್ನ 7 ಜನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ನಂತರ ಈ ಘಟನೆಯ ಬಗ್ಗೆ ಬಾಲಕಿ ತನ್ನ ಹೆತ್ತವರಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಹೇಳಿಕೆ ಮೇಲೆ ವಿಕಿ, ಮುಗಿಲನ್, ಆರ್ ಸೂರ್ಯ, ಕಲಾಯ್, ಕಣ್ಣದಾಸನ್, ದೇವ, ಅಶೋಕ್, ಜಿ ಸೂರ್ಯ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿ ತಿರುವಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಶಿವಕುಮಾರ್ ಗುದ್ದಾಟ, ರಾಜ್ಯದ ಅಭಿವೃದ್ಧಿ ಹಿನ್ನಡೆ: ಸಂಸದ ಯದುವೀರ

ಹೆದ್ದಾರಿಯನ್ನೇ ಬ್ಲಾಕ್ ಮಾಡಿದ ಹುಲಿ, ಜಪ್ಪಯ್ಯ ಎಂದರೂ ದಾರಿ ಬಿಡಲಿಲ್ಲ: ವೈರಲ್ ವಿಡಿಯೋ

ಹಾಂಗ್‌ಕಾಂಗ್‌ನಲ್ಲಿ ಬೆಂಕಿ ಅವಘಡ, 128ಕ್ಕೆ ಏರಿದ ಮೃತರ ಸಂಖ್ಯೆ, ಇನ್ನೂ 200ಮಂದಿ ನಾಪತ್ತೆ

ಒಕ್ಕಲಿಗರಿಗೆ ಅವಕಾಶ ಸಿಗುವ ಸಮಯ ಬಂದಿದೆ: ಡಿಕೆಶಿ ಮನೆಗೆ ಒಕ್ಕಲಿಗ ಸ್ವಾಮೀಜಿ ಭೇಟಿ

ಭಾರತಕ್ಕೆ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಯಾವಾ ಕಾರಣಕ್ಕೆ ಗೊತ್ತಾ

ಮುಂದಿನ ಸುದ್ದಿ