Select Your Language

Notifications

webdunia
webdunia
webdunia
webdunia

747 ವರ್ಷದ ಹರಿಸಿಂಗ್ ಮೀರತ್‌ನ ಅತಿ ಹಿರಿಯ ಮತದಾರನಂತೆ...!

747 ವರ್ಷದ ಹರಿಸಿಂಗ್ ಮೀರತ್‌ನ ಅತಿ ಹಿರಿಯ ಮತದಾರನಂತೆ...!
ಮೀರತ್ , ಸೋಮವಾರ, 20 ಏಪ್ರಿಲ್ 2015 (17:28 IST)
ಮೀರತ್ ಕಂಟೋನ್ಮೆಂಟ್ ಬೋರ್ಡ್ (MCB) ಸಿದ್ಧಪಡಿಸಿರುವ ಚುನಾವಣಾ ರೋಲ್ ಪ್ರಕಾರ, ಮೀರತ್ ಹಳೆಯ ಮತದಾರನ ವಯಸ್ಸು ಬರೊಬ್ಬರಿ 747 ವರ್ಷ ಎಂದರೆ ನಂಬುತ್ತೀರಾ?

ಇಲ್ಲಿನ ಹಿರಿಯ ಮತದಾರರ ಸಾಲಿನಲ್ಲಿ ಇವರೊಬ್ಬರೇ ನಿಲ್ಲುವುದಿಲ್ಲ. ಉಳಿದ ಹಲವರ ಹೆಸರುಗಳು ಕೂಡ 200 ರಿಂದ 600 ವರ್ಷ ವಯಸ್ಸಿನವರ ಪಟ್ಟಿಯಲ್ಲಿ ಕಂಡು ಬಂದಿವೆ. 
 
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಬಂದಿರುವ ವರದಿಯ ಪ್ರಕಾರ ರಾಯಲ್ ಆರ್ಟಿಲರಿ ಬಜಾರ್ (ತೋಫ್‌ಖಾನ್) ಸುಭಾಷ್ ನಗರ ನಿವಾಸಿ ಹರಿಸಿಂಗ್ ಅವರನ್ನು ಪಟ್ಟಿಯಲ್ಲಿ ಅತಿ ಹಿರಿಯ ಎಂದು ತೋರಿಸಲಾಗಿದ್ದು ಆತನಿಗೆ 747 ವರ್ಷ ಎಂದು ಬರೆಯಲಾಗಿದೆ. ಅದರಂತೆ ಬಂಗಲೆ ಪ್ರದೇಶ ನಿವಾಸಿಗಳಾದ ರಚನಾ ಮತ್ತು ಅರುಣಾ ತ್ರಿವೇದಿಯವರಿಗೆ ಕ್ರಮವಾಗಿ 559 ಮತ್ತು 540 ಎಂದು ತೋರಿಸಲಾಗಿದೆ,  ಜತೆಗೆ ಎಮ್‌ಈಎಸ್ ಕಾಲೋನಿ ನಿವಾಸಿ ಪ್ರೇಮಚಂದ್ ಅವರಿಗೆ 545 ವರ್ಷಗಳು ಎನ್ನುತ್ತದೆ ಸಿದ್ಧಪಡಿಸಿರುವ ದಾಖಲೆ. 
 
ವಯಸ್ಸಿನದು ಮಾತ್ರ , ಈ ಪಟ್ಟಿಯಲ್ಲಿ ಕಂಡು ಬಂದಿರುವ ತಪ್ಪಲ್ಲ  ಮತ್ತೆ ಹಲವು ಮಹಾ ಪ್ರಮಾದಗಳಿವೆ. ಉದಾಹರಣೆಗೆ ವಾರ್ಡ್- 2 ನಿವಾಸಿ , ಸುನೀಲ್ ಯಾದವ್ ವಯಸ್ಸು 112. ಆದರೆ ಅವರ ಅಪ್ಪ ಯಾದವ್‌ಗಿಂತ ಚಿಕ್ಕವರಂತೆ.  ಅಂದರೆ ಅವರ ವಯಸ್ಸು  72 ಎಂದು ಪಟ್ಟಿಯಲ್ಲಿ ನಮೂದಿಸಲಾಗಿದೆ. 

Share this Story:

Follow Webdunia kannada