Select Your Language

Notifications

webdunia
webdunia
webdunia
webdunia

2024ರವರೆಗೆ ಮೋದಿ ಅವರೇ ಪ್ರಧಾನಿಯಾಗಬೇಕಂತೆ!

2024ರವರೆಗೆ ಮೋದಿ ಅವರೇ ಪ್ರಧಾನಿಯಾಗಬೇಕಂತೆ!
ನವದೆಹಲಿ , ಸೋಮವಾರ, 2 ಮೇ 2016 (15:13 IST)
ದೇಶದಲ್ಲಿ ಮೋದಿ ಅಲೆ ಕುಗ್ಗುತ್ತಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿರಬಹುದು. ಆದರೆ ಸಮೀಕ್ಷೆಯೊಂದು ಇದು ಸುಳ್ಳೆನ್ನುತ್ತಿದೆ. ಇತ್ತೀಚಿಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ  ಶೇ.70ರಷ್ಟು ಜನ ಮೋದಿ ಅವರ ಆಡಳಿತಕ್ಕೆ ತೃಪ್ತಿ ವ್ಯಕ್ತ ಪಡಿಸಿದ್ದು ಐದು ವರ್ಷ ಆಡಳಿತವನ್ನು ಪೂರೈಸಿದ ಬಳಿಕ ಸಹ ಅವರು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ. 

ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಈ ಸಮೀಕ್ಷೆಯನ್ನು ಕೈಗೊಂಡಿದ್ದು  70% ರಷ್ಟು ಜನರು 2024ರ ವರೆಗೂ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ ಮತ್ತು 62% ಜನರು ಮೋದಿ ಕಾರ್ಯವೈಖರಿ ಬಗ್ಗೆ ತೃಪ್ತಿ ಹೊಂದಿದ್ದಾರೆ. 
 
ಆದರೆ, ಪ್ರತಿಶತ 50ರಷ್ಟು ಜನ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕವೂ ದೇಶದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಆಗಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 
 
ಪ್ರತಿಶತ 15ರಷ್ಟು ಜನರು ಕಳೆದೆರಡು ವರ್ಷಗಳಲ್ಲಿ ತುಂಬ ಹದಗೆಟ್ಟಿದೆ ಎಂದು ಅನಿಸಿಕೆ ವ್ಯಕ್ತ ಪಡಿಸಿದರೆ, 43% ಜನರು ಮೋದಿ ಸರ್ಕಾರ ಜಾರಿಯಲ್ಲಿ ತಂದಿರುವ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. 
 
15 ರಾಜ್ಯಗಳ ಸುಮಾರು 4,000 ಗ್ರಾಮೀಣ ಮತ್ತು ನಗರದ ಜನರನ್ನು ಈ ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗಿತ್ತು. 
 
ಮೋದಿ ಸಂಪುಟದ ಸಾಧನೆಯ ಬಗ್ಗೆ ಕೇಳಲಾಗಿ ಹೆಚ್ಚಿನವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್‌ ಸಿಂಗ್‌, ರೈಲ್ವೆ ಸಚಿವ ಸುರೇಶ್‌ ಪ್ರಭು, ರಕ್ಷಣಾ ಸಚಿವ ಮನೋಹರ ಪರಿಕ್ಕರ್, ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ರಾಮ್‌ ವಿಲಾಸ್‌ ಪಾಸ್ವಾನ್‌, ಬಂಡಾರು ದತ್ತಾತ್ತೇಯ, ಜೆ.ಪಿ. ನಡ್ಡಾ, ಪರಿಸರ ಸಚಿವ ಮತ್ತು ಕೃಷಿ ಸಚಿವ ರಾಧಾ ಮೋಹನ ಸಿಂಗ್‌ ಅವರ ಕಾರ್ಯವೈಖರಿ ಜನರಿಗೆ ತೃಪ್ತಿ ತಂದಿಲ್ಲ.
 
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ ಅವರ ಸಾಧನೆ ಸಾಧಾರಣ ಮಟ್ಟದಲ್ಲಿದೆ ಎಂಬ ಪ್ರತಿಕ್ರಿಯೆ ಸಿಕ್ಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾರುತಿ ಸುಜುಕಿ ಮಾರಾಟದಲ್ಲಿ ಶೇ.13 ರಷ್ಟು ಹೆಚ್ಚಳ