Select Your Language

Notifications

webdunia
webdunia
webdunia
webdunia

7 ಅಪ್ರಾಪ್ತ ಅನಾಥ ಬಾಲಕಿಯರ ಮೇಲೆ 2 ತಿಂಗಳು ಸಾಮೂಹಿಕ ಅತ್ಯಾಚಾರ

7 ಅಪ್ರಾಪ್ತ ಅನಾಥ ಬಾಲಕಿಯರ ಮೇಲೆ 2 ತಿಂಗಳು ಸಾಮೂಹಿಕ ಅತ್ಯಾಚಾರ
ವಯ್ನಾಡ್ , ಮಂಗಳವಾರ, 7 ಮಾರ್ಚ್ 2017 (17:47 IST)
7 ಮಂದಿ ಅಪ್ರಾಪ್ತ ಬಾಲಕಿಯರ ಮೇಲೆ 2 ತಿಂಗಳು ಅತ್ಯಾಚಾರ ಎಸಗಿದ ಹೇಯ ಘಟನೆ ಕೇರಳದಲ್ಲಿ ನಡೆದಿದೆ. 
ಸೋಮವಾರ ಈ ದುಷ್ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ಪೀಡಿತ ಬಾಲಕಿಯರೆಲ್ಲ 14 ರಿಂದ 15ವರ್ಷದೊಳಗಿನವರಾಗಿದ್ದು, ವಯ್ನಾಡ್  ಜಿಲ್ಲೆಯ ಕಲ್ಪೆಟ್ಟಾದ ಮುಟ್ಟಿಲ್‌ನಲ್ಲಿರುವ ಅನಾಥಾಶ್ರಮದಲ್ಲಿ  ಈ ಪೈಶಾಚಿಕ ಕೃತ್ಯವನ್ನೆಗಲಾಗಿದೆ. ಇತ್ತೀಚಿಗೆ ಬಾಲಕಿಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಅಂಗಡಿಯೊಂದರಿಂದ ಹೊರ ಬರುತ್ತಿದ್ದಳು. ಅವಳನ್ನು ಪ್ರಶ್ನಿಸಿದ ಅನಾಥಾಶ್ರಮದ ಸಿಬ್ಬಂದಿಗೆ ಆಕೆ ಎಲ್ಲವನ್ನು ವಿವರಿಸಿದ್ದಾಳೆ. ಹೌಹಾರಿದ ಸಿಬ್ಬಂದಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದಾಳೆ.
 
ತನಿಖೆ ಆರಂಭಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಮತ್ತೆ ಕೆಲವರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
 
ಬಾಲಕಿಯರು ಶಾಲೆಗೆ ಹೋಗುವಾಗ ಸಿಹಿ ತಿನಿಸಿನ ಆಸೆ ತೋರಿಸಿ ಕರೆದು ಅತ್ಯಾಚಾರ ಮಾಡಲಾಗುತ್ತಿತ್ತು . ಬಳಿಕ ಈ ಕುರಿತು ಬಾಯ್ಬಿಡದಂತೆ ಅವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ 8 ಕಾಮುಕರ ಬಂಧನ