Select Your Language

Notifications

webdunia
webdunia
webdunia
webdunia

ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ
ಲಕ್ನೋ , ಸೋಮವಾರ, 18 ಸೆಪ್ಟಂಬರ್ 2023 (08:35 IST)
ಲಕ್ನೋ : ಉತ್ತರ ರೈಲ್ವೆಯ ಲಕ್ನೋ ವಿಭಾಗವು ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂ. ಖರ್ಚು ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರ್ಟಿಐಗೆ ರೈಲ್ವೆ ವಿಭಾಗ ಮಾಹಿತಿ ನೀಡಿದೆ.

2020 ಮತ್ತು 2022 ರ ಅವಧಿಯಲ್ಲಿ 69 ಲಕ್ಷ ರೂ. ಮೊತ್ತವನ್ನು ಇಲಿ ಹಿಡಿಯುವುದಕ್ಕೆ ರೈಲ್ವೆ ಖರ್ಚು ಮಾಡಿದೆ. ಸುದ್ದಿ ಬಹಿರಂಗವಾಗುತ್ತಿದ್ದಂತೆ ಭಾರತೀಯ ರೈಲ್ವೆ ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡಿದೆ. ಭಾರತೀಯ ರೈಲ್ವೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ. 

ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ವಿಭಾಗವು, ಎರಡು ವರ್ಷಗಳಲ್ಲಿ ಇಲಿಗಳನ್ನು ಹಿಡಿಯುವುದಕ್ಕೆ ಸುಮಾರು 69 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲಾಗಿದೆ. ಒಂದು ಇಲಿ ಹಿಡಿಯುವುದಕ್ಕೆ ಸರಿಸುಮಾರು 41,000 ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ