Publish Date: Tue, 16 May 2017 (08:54 IST)
Updated Date: Tue, 16 May 2017 (08:57 IST)
ನವದೆಹಲಿ: ಅಚ್ಚೇ ದಿನ್ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ವೈಖರಿ ದೇಶದ 60 ಶೇಕಡಾ ಜನರಿಗೆ ಮಾತ್ರ ತೃಪ್ತಿ ತಂದಿದೆಯಂತೆ.
ಪ್ರತಿ ಐದು ಜನರಲ್ಲಿ ಮೂವರು ಭಾರತೀಯರಿಗೆ ಮೋದಿ ಸರ್ಕಾರ ತೃಪ್ತಿ ತಂದಿದೆ ಎಂದು ವರದಿಯೊಂದು ತಿಳಿಸಿದೆ. ಮೇ 16 ರಂದು ಮೋದಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಲೋಕಲ್ ಸರ್ಕಲ್ಸ್ ವೆಬ್ ಸೈಟ್ ಸಮೀಕ್ಷೆ ನಡೆಸಿ ಈ ಅಂಶ ಬಹಿರಂಗಪಡಿಸಿದೆ.
ಸಮೀಕ್ಷೆಯಲ್ಲಿ 61% ಮಂದಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಳಿದ 59% ಮಂದಿ ಭರವಸೆಗಳನ್ನು ಪೂರೈಸುವ ಹಾದಿಯಲ್ಲಿದೆಯಷ್ಟೆ ಎಂದಿದ್ದಾರೆ. ಸಮೀಕ್ಷೆಯಲ್ಲಿ ಹೆಚ್ಚು ಮತ ಲಭಿಸಿದ್ದು, ಮೋದಿ ಸರ್ಕಾರದ ವಿದೇಶಾಂಗ ವ್ಯವಹಾರಗಳಿಗೆ ಹಾಗೂ ಪಾಕಿಸ್ತಾನದ ಜತೆಗಿನ ವ್ಯವಹಾರದ ವಿಚಾರಕ್ಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ