Select Your Language

Notifications

webdunia
webdunia
webdunia
webdunia

ವಿನಿಮಯವಾಗದ 60 ಲಕ್ಷ ಕಪ್ಪು ಹಣ ಸಾಗಾಟ, ಕಾರ್ಯಾಚರಣೆಯಲ್ಲಿ ಪತ್ತೆ

ವಿನಿಮಯ
ಹುಬ್ಬಳ್ಳಿ , ಸೋಮವಾರ, 14 ನವೆಂಬರ್ 2016 (13:55 IST)
ಹುಬ್ಬಳ್ಳಿ: ಅಕ್ರಮವಾಗಿ ಸಾಗಿಸುತ್ತಿದ್ದ ೬೦ ಲಕ್ಷ ರೂಗಳ ನಗದನ್ನು ಇಂದು ಮುಂಜಾನೆ ಕೇಶ್ವಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಿಂದ ಹೊಸಪೇಟೆಗೆ Scorpio car(KA 35 M 8395) ನಲ್ಲಿ ಅನಧಿಕೃತವಾಗಿ ಹಣ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೇಶ್ವಾಪುರದ ಹರಿಹಂತ ನಗರದಲ್ಲಿ ಗಾಡಿಯನ್ನು ತಡೆದು ನಗದನ್ನು ವಶಪಡಿಸಿಕೊಂಡಿದ್ದಾರೆ‌. ಸಂದರ್ಭದಲ್ಲಿ ಪ್ರವೀಣ್ ಜೈನ್, ಶ್ರೀನಿವಾಸ ಮೂತಿ೯ ಎಂಬುವವರ ಬಂಧಿಸಿದ್ದಾರೆ.
 
ಹೊಸಪೇಟೆಯಿಂದ ಹುಬ್ಬಳ್ಳಿ ಸಂಬಂಧಿ ಮನೆಗೆ ಈ ಹಣ ವಿನಿಮಯಕ್ಕೆ ತರಲಾಗಿತ್ತು ಎನ್ನಲಾಗಿದೆ. ಅಷ್ಟೊಂದು ಮೊತ್ತದ ಹಣ ವಿನಿಮಯ ಅಸಾಧ್ಯ ಎಂದು ತಿಳಿದಾಗ ಪುನಃ ಹೊಸಪೇಟೆಗೆ ಕೊಂಡೊಯ್ಯುತ್ತಿದ್ದರು. ದಾಳಿ ಸಂದರ್ಭದಲ್ಲಿ ೫೦೦ ಹಾಗೂ ೧೦೦೦ ಮುಖಬೆಲೆಯ ನೋಟುಗಳೇ ದೊರಕಿದೆ.
 
ಪ್ರಕರಣ ಕೇಶ್ವಾಪುರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ವೀರ್ ಸೇಠ್ ವಿರುದ್ಧ ಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಆಗ್ರಹ