Select Your Language

Notifications

webdunia
webdunia
webdunia
webdunia

6 ತಿಂಗಳ ಬಳಿಕ ಮತ್ತೆ ಅದೇ ಬಾಲಕಿಯ ಮೇಲೆ ಅತ್ಯಾಚಾರ

6 month
ಬದೌನ್ , ಶುಕ್ರವಾರ, 30 ಸೆಪ್ಟಂಬರ್ 2016 (14:13 IST)
ಕಳೆದ 6 ತಿಂಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ 15 ವರ್ಷದ ಬಾಲಕಿ ಮತ್ತೆ ಅದೇ ವ್ಯಕ್ತಿಯಿಂದ ಅತ್ಯಾಚಾರಕ್ಕೊಳಗಾದ ಹೇಯ ಘಟನೆ ಬದೌನ್‌ನಲ್ಲಿ ನಡೆದಿದೆ.

ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ 17 ವರ್ಷದ ಅಪ್ರಾಪ್ತ ಬಾಲಕ ಕಳೆದ 6 ತಿಂಗಳ ಹಿಂದೆ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ. ಆತನ ವಿರುದ್ಧ ಪೊಲೀಸ್ ಪ್ರಕರಣ ಕೂಡ ದಾಖಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ಆತನನ್ನು ಸುಧಾರಣೆಗಾಗಿ ಬಾಲಗೃಹಕ್ಕೆ ಕಳುಹಿಸಲಾಗಿತ್ತು. ಶಿಕ್ಷೆ ಮುಗಿಸಿ ಹೊರ ಬಿದ್ದಿರುವ ಆತ ಮತ್ತದೇ ತಪ್ಪನ್ನು ಮರುಕಳಿಸಿದ್ದಾನೆ. ಜತೆಗೆ ಆಕೆಯ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ. 
 
ಪ್ರಕರಣದಲ್ಲಿ ಪೊಲೀಸರ ವಿರುದ್ಧ ಕೂಡ ಆರೋಪ ಕೇಳಿ ಬಂದಿದೆ. ಪೊಲೀಸರು ಅತ್ಯಾಚಾರ ಪ್ರಕರಣವನ್ನು ಲೈಂಗಿಕ ದೌರ್ಜನ್ಯ ಪ್ರಕರಣವಾಗಿ ಬದಲಾಯಿಸಿದ್ದಾರೆ. ತಾನು ಅನಕ್ಷರಸ್ಥೆಯಾಗಿದ್ದರಿಂದ ಪೊಲೀಸರು ಹಲವು ದಾಖಲೆಗಳ ಮೇಲೆ ಹೆಬ್ಬೆಟ್ಟನ್ನು ಒತ್ತಿಸಿಕೊಂಡಿದ್ದಾರೆ ಎಂದು ಬಾಲಕಿ ನ್ಯಾಯಾಧೀಶರ ಮುಂದೆ ದೂರಿದ್ದಾಳೆ. 
 
ಈ ಹಿಂದೆ ಕೂಡ ಪೊಲೀಸರು ಹೀಗೆಯೇ ಮಾಡಿದ್ದರು ಎಂದಾಕೆ ಆರೋಪಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಸೇನಾ ದಾಳಿ: ಮೊದಲ ಬಾರಿ ಮೋದಿಯನ್ನು ಹೊಗಳಿದ ರಾಹುಲ್ ಗಾಂಧಿ