ಗೋವಾ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿದಿರುವ 250 ಉಮೇದುವಾರರ ಪೈಕಿ 57 ಮಂದಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಅದರಲ್ಲಿ 19 ಜನ ಗಂಭೀರ ಅಪರಾಧದ ಆರೋಪವನ್ನು ಹೊತ್ತವರಾಗಿದ್ದಾರೆ.
ಕಾಂಗ್ರೆಸ್‌ನ 37 ಅಭ್ಯರ್ಥಿಗಳ ಪೈಕಿ 6, ಬಿಜೆಪಿಯ 36 ಉಮೇವುವಾರರ ಪೈಕಿ 3, ಎಂಜಿಪಿಯ 25 ಅಭ್ಯರ್ಥಿಗಳ ಪೈಕಿ 2, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಲ್ಲಿ (17ಅಭ್ಯರ್ಥಿ) 1, ಗೋವಾ ಫಾರ್ವರ್ಡ್ 1, ಯುನೈಟೆಡ್ ಗೋವನ್ಸ್ 2, 58 ಪಕ್ಷೇತರರ ಪೈಕಿ 4 ಅಭ್ಯರ್ಥಿಗಳು ಅಪರಾಧಿಕ ಹಿನ್ನೆಲೆ ಹೊಂದಿದ್ದಾರೆ. ಒಟ್ಟು 38 ಉಮೇವಾರರ ವಿರುದ್ಧ ಗೋವಾದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಅದರಲ್ಲಿ ಆಮ್ ಆದ್ಮಿ-3, ಪಕ್ಷೇತರ 9, ಬಿಜೆಪಿ 3, ಕಾಂಗ್ರೆಸ್ 5, ಎಂಜಿಪಿ 2, ರಾಷ್ಟ್ರವಾದಿ ಕಾಂಗ್ರೆಸ್‌ನ 5 ಅಭ್ಯರ್ಥಿಗಳ ಹೆಸರಿದೆ.
30 ಅಭ್ಯರ್ಥಿಗಳು 10ಕೋಟಿಗೂ ಹೆಚ್ಚಿನ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಕಣದಲ್ಲಿರುವ ಮಹಿಳೆಯರ ಸಂಖ್ಯೆ 18.
ಇದೇ 4 ರಂದು ಗೋವಾದಲ್ಲಿ ಚುನಾವಣೆ ನಡೆಯಲಿದ್ದು ಇಂದು ಪ್ರಚಾರಕ್ಕೆ ಕೊನೆಯ ದಿನ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ