Select Your Language

Notifications

webdunia
webdunia
webdunia
webdunia

ಕೊಳವೆ ಬಿದ್ದ 5 ವರ್ಷದ ಕಂದಮ್ಮ: ಎರಡು ದಿನದಿಂದ ಆರ್ಯನ್‌ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ

Tubewell Avaghada

Sampriya

ಜೈಪುರ , ಬುಧವಾರ, 11 ಡಿಸೆಂಬರ್ 2024 (17:59 IST)
Photo Courtesy X
ಜೈಪುರ: ದೇಶದಲ್ಲಿ ಮತ್ತೊಂದು ಕೊಳವೆಬಾವಿ ಅವಘಡ ಸಂಭವಿಸಿದೆ. ರಾಜಸ್ಥಾನದ ದೌಸಾದಲ್ಲಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಐದು ವರ್ಷದ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಕಾಳಿಖಾಡ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಆರ್ಯನ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದನು. ಒಂದು ತಾಸಿನ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿ 48 ತಾಸು ಕಳೆದಿದ್ದು, ಆರ್ಯನ್‌ನನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನ ನಡೆಯುತ್ತಿದೆ. ಮಗುವಿನ ಹತ್ತಿರ ತಲುಪಲು ಕೊಳವೆ ಬಾವಿಗೆ ಸಮಾನಾಂತರವಾಗಿ ಅಗೆಯಲಾಗುತ್ತಿದೆ. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಅನೇಕ ತೊಡಕುಗಳು ಎದುರಾಗುತ್ತಿವೆ

ಪ್ರದೇಶದಲ್ಲಿ ನೀರಿನ ಮಟ್ಟ ಸುಮಾರು 160 ಅಡಿ ಆಳದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ನೆಲದಡಿಯಲ್ಲಿ ತೇವದಿಂದಾಗಿ ಮಗುವಿನ ಚಲನವಲನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲ. ನಾವು 150 ಅಡಿಗಳವರೆಗೆ ಹೋಗಬಹುದು. ಆದರೆ ಅದಕ್ಕಿಂತಲೂ ಕೆಳಗಡೆ ಹೋಗುವುದು ಸವಾಲಿನಿಂದ ಕೂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೆಯುವ ಯಂತ್ರದ ನೆರವಿನಿಂದ 110 ಅಡಿಯವರೆಗೆ ಅಗೆಯಲಾಗಿದ್ದು, ಉಳಿದ 40 ಅಡಿ ಆಳದವರೆಗೆ ಡ್ರಿಲ್ ಮಾಡುವ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಧುನಿಕ ಬೆಂಗಳೂರಿನ ನಿರ್ಮಾತೃಗೆ ಅಂತಿಮ ವಿದಾಯ: ಎಸ್ಎಂ ಕೃಷ್ಣ ಅಂತಿಮ ಕ್ರಿಯೆ ಹೀಗಿತ್ತು