Select Your Language

Notifications

webdunia
webdunia
webdunia
webdunia

ನವದೆಹಲಿಯಲ್ಲಿ ಅಗ್ನಿ ಅನಾಹುತ: 43 ಮಂದಿ ಸಾವು

ಅಗ್ನಿ ಅವಘಡ
ನವದೆಹಲಿ , ಭಾನುವಾರ, 8 ಡಿಸೆಂಬರ್ 2019 (10:57 IST)
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, 43 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.


ದೆಹಲಿಯ ಆಂಜ್ ಮಂಡಿ ಪ್ರದೇಶದಲ್ಲಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಈ ಭಾರೀ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದೊಂದು ಫ್ಯಾಕ್ಟರಿ ಕಟ್ಟಡವಾಗಿದ್ದು ಒಳಗೆ ನೂರಾರು ಜನ ಸಿಲುಕಿಕೊಂಡಿದ್ದಾರೆ. ದಟ್ಟ ಹೊಗೆಯಿಂದಾಗಿ ಜನರಿಗೆ ಹೊರಗೆ ಬರಲು ಸಾಧ‍್ಯವಾಗದೇ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಇವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ರಿಸಲ್ಟ್ ಮೇಲೆ ಕಣ್ಣು – ಬೆಟ್ಟಿಂಗ್ ಭಲೇ ಜೋರು