Select Your Language

Notifications

webdunia
webdunia
webdunia
webdunia

ಟಿವಿ ನೋಡಲು ಬಂದ ಪುಟ್ಟ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ

ಟಿವಿ ನೋಡಲು ಬಂದ ಪುಟ್ಟ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ
ಕಾನ್ಪುರ , ಬುಧವಾರ, 12 ಅಕ್ಟೋಬರ್ 2016 (09:02 IST)
ಟಿವಿ ನೋಡಲು ಬಂದ ಪುಟ್ಟ ಮಗುವಿನ ಮೇಲೆ ಮನೆ ಮಾಲೀಕ ಮತ್ತು ಆತನ ಸಂಬಂಧಿ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 
 
ಜೂಹಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೀಡಿತ ಬಾಲಕಿ ಮತ್ತು ಪೋಷಕರು ಬಾಡಿಗೆಗಿದ್ದ ಮನೆ ಮಾಲೀಕನೇ ಈ ದುಷ್ಕೃತ್ಯವೆಸಗಿದ್ದಾನೆ. 
 
ಮಂಗಳವಾರ ಬಾಲಕಿ ಮನೆ ಮಾಲೀಕರ ಮನೆಗೆ ಟಿವಿ ನೋಡಲು ಹೋಗಿದ್ದಳು. ಆ ಸಂದರ್ಭದಲ್ಲಿ ಪಾನಮತ್ತರಾಗಿದ್ದ ಮನೆ ಮಾಲೀಕ ಮತ್ತು ಆತನ ಸಂಬಂಧಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬೆದರಿದ ಬಾಲಕಿ ಚೀರಿಕೊಂಡಿದ್ದಾಳೆ. ತಕ್ಷಣವೇ ನೆರೆಹೊರೆಯವರು ಅಲ್ಲಿಗೋಡಿ ಬಂದಿದ್ದಾರೆ. 
 
ಆರೋಪಿಗಳಲ್ಲಿ ಒಬ್ಬ ಪರಾರಿಯಾಗಿದ್ದು ಮತ್ತೊಬ್ಬನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. 
 
ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯವನ್ನಾರಂಭಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿಯಂತೆ ಮಹದಾಯಿ ವಿಚಾರಕ್ಕೂ ಸ್ಪಂದಿಸಬೇಕು: ಎನ್‌.ಎಚ್.ಕೋನರೆಡ್ಡಿ